ಮೈಸೂರು

ವಚನಸಿರಿ ಕೃತಿ ಲೋಕಾರ್ಪಣೆ : ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭ

ಯಶು ಚಿಲ್ಡ್ರನ್ ಅಂಡ್ ಕಲ್ಚರಲ್ ಅಕಾಡೆಮಿ ವತಿಯಿಂದ ಭಾನುವಾರ ಐಡಿಯಲ್ ಜಾವಾ ರೋಟರಿ ಶಾಲೆಯಲ್ಲಿ ‘ವಚನಸಿರಿ’ ಕೃತಿ ಲೋಕಾರ್ಪಣೆ ಮತ್ತು ಮಕ್ಕಳಿಗೆ ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ನಿವೃತ್ತ ಕಾರ್ಯಪಾಲಕ ಅಭಿಯಂತರ ಕೃಷ್ಣಗಿರಿ ರಾಮಚಂದ್ರ ಅವರು ಯಶೋಧ ನಾರಾಯಣ್ ಅವರ ‘ವಚನಸಿರಿ’ ಆಧುನಿಕ ವಚನಗಳ ಸಂಕಲನ ಲೋಕಾರ್ಪಣೆಯನ್ನು ಮಾಡಿದರು. ಬಳಿಕ  ಮಾತನಾಡಿದ ಅವರು ವಚನ ಸಾಹಿತ್ಯ ಬೆಳೆದು ಬಂದ ದಾರಿ, ಮುಕ್ತಕಗಳ ಹಾದಿ ಮತ್ತು ಪ್ರಕಾರಗಳ ಬಗ್ಗೆ ವಿವರಿಸಿದರು.

ನಂತರ ವಚನಸಿರಿ ಕೃತಿಯ ಬಗ್ಗೆ ಆಕಾಶವಾಣಿ ಗಮಕ ಕಲಾವಿದೆ ವಸಂತ ವೆಂಕಟೇಶ್ ಮಾತನಾಡಿ ಈ ಕೃತಿಯಲ್ಲಿ ಆಧುನಿಕ ವಚನಗಳ ಗುಚ್ಛ ಇದೆ.  ವಚನಗಳ ರಚನೆಯ ಉದ್ದೇಶ ಅಂದಿಗೂ ಇಂದಿಗೂ ಒಂದೇ ರೀತಿಯಾಗಿದೆ. ಸಮಾಜದ ಒಳಿತಿಗಾಗಿ ವಚನಗಳು ರಚನೆಯಾಗುತ್ತಿವೆ. ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿವೆ. ನಮ್ಮ ದೈನಂದಿನ ಜೀವನದ ವಾಸ್ತವ ಸಂಗತಿಗಳನ್ನು ಆಧಾರವಾಗಿಟ್ಟುಕೊಂಡು ವಚನ ರಚಿಸಿದ್ದಾರೆ. ಆಧ್ಯಾತ್ಮ, ತತ್ವಜ್ಞಾನ, ದೈವಿಕ ಪ್ರಜ್ಞೆ, ತಾಯಿಯ ಮಮತೆ, ವಿದ್ಯೆಯ ಪಾವಿತ್ರ್ಯತೆ, ಸ್ತ್ರೀ ಶೋಷಣೆ ಇನ್ನೂ ಮೊದಲಾದ ವಾಸ್ತವ ವಿಚಾರಗಳ ಬಗ್ಗೆ ಹೇಳಿದ್ದಾರೆ. ಸ್ವಾರ್ಥ ನಿಸ್ವಾರ್ಥದ ನಡುವಣ ವ್ಯತ್ಯಾಸದ ಬಗ್ಗೆ, ಬದುಕಿನ ಸಾರ್ಥಕತೆಯ ಗುಟ್ಟು, ಹೆಣ್ಣು ಭ್ರೂಣ ಹತ್ಯೆಯ ಆಕ್ರೋಶ, ಜಾತಿ ಅಸಮಾನತೆ, ಪ್ರಾಮಾಣಿಕತೆ ಹೀಗೆ ವಿಭಿನ್ನ ವಿಷಯಗಳನ್ನು ವಚನದ ವಸ್ತುವನ್ನಾಗಿಸಿಕೊಂಡಿದ್ದಾರೆ ಎಂದು ತಿಳಿಸಿದರು.

ನಂತರ ಮಕ್ಕಳಿಗೆ ಚಿಗುರು ರತ್ನ, ಪ್ರತಿಭಾ ರತ್ನ, ಸಾಧನ ರತ್ನ ಮತ್ತು ಪುಟಾಣಿ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಪದ್ಮತ್ಯಾಗರಾಜ್, ಯಶು ಚಿಲ್ಡ್ರನ್ ಅಂಡ್ ಕಲ್ಚರಲ್ ಅಕಾಡೆಮಿಯ ವ್ಯವಸ್ಥಾಪಕಿ ಮತ್ತು ಕೃತಿ ರಚನಕಾರ್ತಿ ಯಶೋಧ ನಾರಾಯಣ್, ಕಾರ್ಯದರ್ಶಿ ಸುಮನ್ ಅನುಷ್, ಸಮಾಜ ಸೇವಕಿ ಅಮಿತಾ ಸುಬ್ಬಯ್ಯ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: