ಮೈಸೂರು

ಚಿಟ್ಟನಹಳ್ಳಿ ವಲಯ ಶ್ರೀ ಮಂಜುನಾಥ ಮಹಿಳಾ ಸ್ವ-ಸಹಾಯ ಸಂಘ ಪದಾಧಿಕಾರಿಗಳ ಪದಗ್ರಹಣ

ಬೈಲಕುಪ್ಪೆ: ಪ್ರಾಮಾಣಿಕತೆಯನ್ನು ಸದ್ಬಳಕೆ ಮಾಡಿಕೊಂಡಾಗ ಆರ್ಥಿಕ ಸ್ಥಿತಿ ಸುಧಾರಣೆಯಾಗಲಿದೆ ಎಂದು ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಎಸ್. ರಾಮು ಅಭಿಪ್ರಾಯಪಟ್ಟರು.

ಪಿರಿಯಾಪಟ್ಟಣ ತಾಲೂಕಿನ ನಂದಿನಾಥಪುರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಭಾನುವಾರ ಚಿಟ್ಟನಹಳ್ಳಿ ವಲಯ ಶ್ರೀ ಮಂಜುನಾಥ ಮಹಿಳಾ ಸ್ವ-ಸಹಾಯ ಸಂಘ ವತಿಯಿಂದ ಏರ್ಪಡಿಸಿದ್ದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸ್ವಾವಲಂಬಿ ಜೀವನವನ್ನು ನಡೆಸಬೇಕಾದರೆ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡುವುದರ ಜೊತೆಗೆ ಮಧ್ಯಪಾನ, ಗುಟ್ಕಾ ಸೇರಿದಂತೆ ಅನೇಕ ಅನಿಷ್ಟ ಪದ್ಧತಿಗಳನ್ನು ದೂರವಿಡಲು ಮಹಿಳೆಯರು ಹೆಚ್ಚು ಪಾತ್ರ ವಹಿಸಬೇಕೆಂದು ಮನವಿ ಮಾಡಿದರು.

ತಾಪಂ ಸದಸ್ಯ ಎ.ಟಿ. ರಂಗಸ್ವಾಮಿ ಮಾತನಾಡಿ, ಪುರುಷ ಪ್ರಧಾನವಾದ ಪ್ರಸ್ತುತ ಪರಿಸ್ಥಿಯಲ್ಲಿ ಶ್ರೀ ಮಂಜುನಾಥಸ್ವಾಮಿ ಟ್ರಸ್ಟ್ ಸ್ಥಾಪಕರಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮಹಿಳೆಯರನ್ನು ಸಂಘಟಿತರನ್ನಾಗಿ ಮಾಡಿ ಹಣಕಾಸಿನ ವ್ಯವಾಹರದಲ್ಲಿ ಯಾವುದೇ ಅಪಸ್ವರ ಇಲ್ಲದಂತೆ ಸುವ್ಯವಸ್ಥೆಯಿಂದ ಕೊಂಡೊಯ್ಯತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಹಕಾರ ಸಂಘದ ಅಧ್ಯಕ್ಷ ಹೆಚ್.ಡಿ. ರಾಜೇಂದ್ರಪ್ಪ ಮಾತನಾಡಿ, ಕೌಟುಂಬಿಕ ಜವಾಬ್ದಾರಿಯೊಂದಿಗೆ ಸಾಮಾಜಿಕ ಜವಾಬ್ದಾರಿಯತ್ತ ಮಹಿಳೆಯರು ಮುಂದಾಗುತ್ತಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಶ್ರೀ ಮಂಜುನಾಥಸ್ವಾಮಿ ಮಹಿಳಾ ಸ್ವ-ಸಹಾಯ ಸಂಘದ ನೂತನ ಪದಾಧಿಕಾರಗಳನ್ನು ನೇಮಕ ಮಾಡಿ ಅಧಿಕಾರ ಹಸ್ತಂತಾರಿಸಲಾಯಿತು.

ಶ್ರೀ ಮಂಜುನಾಥ ಸ್ವಾಮಿ ಮಹಿಳಾ ಸ್ವ-ಸಹಾಯ ಸಂಘದ ಮೇಲ್ವಿಚಾರಕಿ ಸುಜಾತ ಅವರು ಸ್ವಸಾಹಯ ಸಂಘದಿಂದ ಸಿಗುವ ಸೌಲಭ್ಯಗಳ ಬಗ್ಗೆ ವಿವ ನೀಡಿದರು. ಸಂಘದ ಉಪಾಧ್ಯಕ್ಷ ಎಚ್.ಬಿ. ಗೋವಿಂದೆಗೌಡ, ಗ್ರಾ.ಪಂ. ಅಧ್ಯಕ್ಷ ಕುಮಾರ, ಸಹಕಾರ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಸಿ. ಶಿವಣ್ಣ ಮಾತನಾಡಿದರು.

ಚಿಟ್ಟನಹಳ್ಳಿ ವಲಯದ ಅಧ್ಯಕ್ಷೆ ರಾಗಿಣಿ, ಕುಂದನಹಳ್ಳಿ ಗ್ರಾಮದ ತಾಯಮ್ಮ, ಮೇಲ್ವಿಚಾರಕ ಧನಂಜಯ, ಸರೋಜ, ಶಾರದ, ಸೇರಿದಂತೆ ಸುಮಾರು 400ಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಂಡಿದ್ದರು.

ವರದಿ: ರಾಜೇಶ್

dscn8866-web

Leave a Reply

comments

Related Articles

error: