ಕರ್ನಾಟಕಪ್ರಮುಖ ಸುದ್ದಿ

ದಲಿತ ಯುವಕನ ವಿವಾಹವಾಗಿದ್ದಕ್ಕೆ ಪುತ್ರಿಯ ಕೈ, ದವಡೆ ಕತ್ತರಿಸಿದ ತಂದೆ!

ಹೈದರಾಬಾದ್ (ಸೆ.20): ದಲಿತ ಯುವಕನನ್ನು ವಿವಾಹವಾದ ಕಾರಣಕ್ಕೆ ತಂದೆಯೇ ಮಗಳ ಕೈ ಮತ್ತು ದವಡೆ ಕತ್ತರಿಸಿದ ಹೃದಯ ವಿದ್ರಾವಕ ಘಟನೆ ತೆಲಂಗಾಣ ರಾಜಧಾನಿ ಹೈದರಾಬಾದ್ ನಗರದಲ್ಲಿ ನಡೆದಿದೆ. ಮಾತ್ರವಲ್ಲ ದಲಿತ ಯುವಕನ ಮೇಲೂ ಹಲ್ಲೆ ಮಾಡಲಾಗಿದೆ.

ಇತ್ತೀಚೆಗೆ ನಲ್ಗೊಂಡಾದಲ್ಲಿ ದಲಿತ ಯುವಕನೊಬ್ಬನನ್ನು ಗರ್ಭಿಣಿ ಪತ್ನಿಯ ಎದುರೇ ನಿರ್ದಯವಾಗಿ ಹತ್ಯೆ ಮಾಡಿದ ಘಟನೆಯ ಬೆನ್ನಲ್ಲೇ ಮತ್ತೊಂದು ಇಂತಹುದೇ ಭೀಬತ್ಸ ಪ್ರಕರಣ ಬೆಳಕಿಗೆ ಬಂದಿದೆ. ಇತರ ಹಿಂದುಳಿದ ವರ್ಗಕ್ಕೆ ಸೇರಿದ ಯುವತಿ ದಲಿತ ಯುವಕನನ್ನು ವಿವಾಹವಾದ್ದರಿಂದ ರೊಚ್ಚಿಗೆದ್ದ ತಂದೆ ಮೊದಲು ಯುವಕ ಬಿ.ಸಂದೀಪ್ (22) ಎಂಬಾತನ ಮೇಲೆ ಹಲ್ಲೆ ಮಾಡಿದರು.

ಸಂದೀಪ್ ಹಾಗೂ ಮಾಧವಿಚಾರಿ ಐದು ವರ್ಷಗಳಿಂದ ಪ್ರೇಮಸಂಬಂಧ ಹೊಂದಿದ್ದು, ತಂದೆ ಮನೋಹರ್ ಚಾರಿ(42)ಯ ತೀವ್ರ ವಿರೋಧದ ನಡುವೆಯೂ ಸೆಪ್ಟೆಂಬರ್ 12ರಂದು ರಹಸ್ಯವಾಗಿ ವಿವಾಹವಾಗಿದ್ದರು. ಬುಧವಾರ ಮಧ್ಯಾಹ್ನ ಮಗಳಿಗೆ ದೂರವಾಣಿ ಕರೆ ಮಾಡಿ ಅಳಿಯನೊಂದಿಗೆ ಬರುವಂತೆ ತಂದೆ ಆಹ್ವಾನಿಸಿದ್ದ.

ಎರ್ರಗಡ್ಡ ಪ್ರದೇಶದ ಗೋಕುಲ್ ಥಿಯೇಟರ್ ಬಳಿಗೆ ಸಂಜೆ 3:30ರ ವೇಳೆಗೆ ಬಂದಾಗ, ಮಾಧವಿಯ ತಂದೆ ಚೀಲದಿಂದ ಹರಿತವಾದ ಆಯುಧ ತೆಗೆದು ಮೊದಲು ಸಂದೀಪ್ ಮೇಲೆ ಹಲ್ಲೆಗೆ ಮುಂದಾದ. ತಕ್ಷಣ ಸಂದೀಪ್ ತಪ್ಪಿಸಿಕೊಂಡು ಹೋಗಿರುವುದು ಪೊಲೀಸ್ ಸಿಸಿಟಿವಿ ದೃಶ್ಯಾವಳಿಯಿಂದ ಕಂಡುಬರುತ್ತದೆ. ಆಗ ಮಗಳತ್ತ ಕತ್ತಿ ಬೀಸಿದ ತಂದೆ ಆಕೆಯ ಕೈ ಕತ್ತರಿಸಿದ. ಬಳಿಕ ಮುಖವನ್ನೂ ಗಾಯಗೊಳಿಸಿದ್ದು, ಈ ದೃಶ್ಯಗಳೆಲ್ಲಾ ಸಿಸಿಟಿವಿ ದೃಶ್ಯಾವಳಿಯಲ್ಲಿ ದಾಖಲಾಗಿವೆ ಎನ್ನಲಾಗಿದೆ. (ಎನ್.ಬಿ)

Leave a Reply

comments

Related Articles

error: