ಮೈಸೂರು

ದಸರಾ ಮಹೋತ್ಸವ : ವಸ್ತು ಪ್ರದರ್ಶನ ಪ್ರಾಧಿಕಾರದಿಂದ ಸಕಲ ಸಿದ್ಧತೆ ;ಶಶಿಕುಮಾರ್

ಮೈಸೂರು,ಸೆ.20:- ಮೈಸೂರು ದಸರಾ ಮಹೋತ್ಸವ 2018ಕ್ಕೆ ಸಂಬಂಧಿಸಿದಂತೆ ಮೈಸೂರು ವಸ್ತು ಪ್ರದರ್ಶನ ಪ್ರಾಧಿಕಾರದಿಂದ ಸಕಲ ಸಿದ್ಧತೆ ನಡೆಯುತ್ತಿದೆ ಎಂದು ವಸ್ತು ಪ್ರದರ್ಶನದ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಣಾಧಿಕಾರಿ ಶಶಿಕುಮಾರ್ ತಿಳಿಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಅ.10ರಂದು ದಸರಾ ವಸ್ತುಪ್ರದರ್ಶನ ಉದ್ಘಾಟನೆಯನ್ನು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ನೆರವೇರಿಸಲಿದ್ದಾರೆ. ಈಗಾಗಲೇ ಮಳಿಗೆಗಳ ಸ್ಥಾಪನೆಗೆ ಸರ್ಕಾರದ 31 ಇಲಾಖೆಗಳು ಅರ್ಜಿ ಸಲ್ಲಿಸಿವೆ. ಅ.10 ರಿಂದ ಜನವರಿ 7ರವರೆಗೆ ಮೂರು ತಿಂಗಳ ಕಾಲ ವಸ್ತುಪ್ರದರ್ಶನ ನಡೆಯಲಿದೆ ಎಂದರು. ವಿದ್ಯುತ್ ದೀಪದಿಂದ ಅಲಂಕೃತವಾದ ಚಾಮುಂಡೇಶ್ವರಿ ಪ್ರತಿಕೃತಿ ಹಾಗೂ ಮಹಾರಾಜರ ಪ್ರತಿಕೃತಿಗಳು ಈ ಬಾರಿಯ ವಿಶೇಷವಾಗಿದ್ದು, ಉನ್ನತ ಶಿಕ್ಷಣ ಇಲಾಖೆಯಿಂದ ಇದೇ ಮೊದಲ ಬಾರಿಗೆ ಮಳಿಗೆ ಸ್ಥಾಪನೆಯಾಗಲಿದೆ. ಉನ್ನತ ಶಿಕ್ಷಣದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲು ಮಳಿಗೆ ಸ್ಥಾಪನೆ ಮಾಡಲಾಗುವುದು. ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಕಲ್ಪಿಸಲಾಗುವುದು. ಟಿಕೇಟ್ ಕೌಂಟರ್ ಹಾಗೂ ಪಾರ್ಕಿಂಗ್ ವ್ಯವಸ್ಥೆಗೆ ಟೆಂಡರ್ ಕರೆಯಲಾಗಿದೆ ಎಂದು ಮಾಹಿತಿ ನೀಡಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: