ದೇಶಪ್ರಮುಖ ಸುದ್ದಿ

ಕಾನೂನು ಆಯೋಗ ಸಲಹೆ: ಹಿಂದೂ ಕುಟುಂಬ ತೆರಿಗೆ ಪದ್ಧತಿಗೆ ವಿದಾಯ?

ನವದೆಹಲಿ (ಸೆ.20): ಉದ್ಯೋಗಸ್ಥ ಯುವಜನರು ಕೌಟುಂಬಿಕ ತೆರಿಗೆ ಪದ್ಧತಿಯಿಂದ ಸಮಸ್ಯೆಗೆ ಒಳಗಾಗಿದ್ದು, ಇದನ್ನು ಸರಳೀಕರಿಸಬೇಕೆಂಬ ಬೇಡಿಕೆ ಕೇಳಿ ಬಂದಿರುವ ಹಿನ್ನಲೆಯಲ್ಲಿ ಕೇಂದ್ರ ಕಾನೂನು ಆಯೋಗವು ಈ ಕಾನೂನಿನಿಗೆ ತಿದ್ದುಪಡಿ ತರುವಂತೆ ಸಲಹೆ ಮಾಡಿದೆ.

ಯುವ ಉದ್ಯೋಗಸ್ಥರ ಬೇಡಿಕೆಗೆ ಸ್ಪಂದನೆ ನೀಡುವ ನಿಟ್ಟಿನಲ್ಲಿ ಹಿಂದೂ ಅವಿಭಜಿತ ಕುಟುಂಬ ತೆರಿಗೆ ಪದ್ಧತಿಯನ್ನು ರದ್ದುಪಡಿಸುವ ಪ್ರಸ್ತಾಪವನ್ನು ಕಾನೂನು ಆಯೋಗವು ಕೇಂದ್ರ ಸರಕಾರದ ಮುಂದಿಟ್ಟಿದೆ ಎನ್ನಲಾಗಿದ್ದು, ಈಗ ಆ ಬಗೆಗಿನ ಸಮಸ್ಯೆಯನ್ನು ನಿವಾರಣೆ ಮಾಡುವುದಕ್ಕೆ ಮುಂದಾಗಿದೆ ಎನ್ನಲಾಗಿದೆ. (ಎನ್.ಬಿ)

Leave a Reply

comments

Related Articles

error: