ಪ್ರಮುಖ ಸುದ್ದಿ

ಸರ್ಕಾರಕ್ಕೆ ಕಾಟ ಕೊಟ್ಟರೆ ಬಿಜೆಪಿ ವಿರುದ್ಧ ದಂಗೆ ಏಳುವಂತೆ ಜನರಿಗೆ ಕರೆ ನೀಡುತ್ತೇನೆ : ಸಿಎಂ ಹೆಚ್.ಡಿ ಕುಮಾರಸ್ವಾಮಿ ಎಚ್ಚರಿಕೆ

ರಾಜ್ಯ(ಹಾಸನ)ಸೆ.20;- ಸರ್ಕಾರಕ್ಕೆ ಕಾಟ ಕೊಟ್ಟರೆ ಸುಮ್ಮನಿರುವುದಿಲ್ಲ. ಬಿಜೆಪಿ ವಿರುದ್ಧ  ದಂಗೆ ಏಳುವಂತೆ ಜನರಿಗೆ ಕರೆ ನೀಡುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪನವರಿಗೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.

ಕಾವೇರಿ ನೀರಾವರಿ ನಿಗಮದ ವತಿಯಿಂದ ಹಾಸನ ಜಿಲ್ಲಾ ಚನ್ನರಾಯಪಟ್ಟಣ ತಾಲೂಕಿನ ಹಿರಿಸಾವೆ ಹಲಗೊಂಡನಹಳ್ಳಿ ಏತ ನೀರಾವರಿ ಯೋಜನೆ ಚನ್ನರಾಯಪಟ್ಟಣ ಅಮಾನಿಕೆರೆ ಏತ ನೀರಾವರಿ ಯೋಜನೆ ಬಾಗೂರು ನವಿಲೆ ಸುರಂಗದ ನಿರ್ಗಮನ ಕಾಲುವೆಯಿಂದ 19 ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆಗೆ  ಸಿಎಂ ಹೆಚ್.ಡಿ ಕುಮಾರಸ್ವಾಮಿ ಶಂಕು ಸ್ಥಾಪನೆ ನೆರವೇರಿಸಿದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಸಿಎಂ ನಾನು ಪ್ರತಿದಿನ ಇವರ ಕಾಟ ಸಹಿಸಿಕೊಳ್ಳಬೇಕೋ ? ರಾಜ್ಯದ ಜನರ ಹಿತ ಕಾಯಬೇಕೋ ಒಂದು ವೇಳೆ ಸರ್ಕಾರವನ್ನು ಬೀಳಿಸುವುದಕ್ಕೆ ಬಿಜೆಪಿ ಹಾಗೂ ಬಿಎಸ್ ಯಡಿಯೂರಪ್ಪ ಪ್ರಯತ್ನಿಸಿದರೇ ನಾವೇ ರಾಜ್ಯದ ಜನತೆಗೆ ದಂಗೆ ಏಳುವಂತೆ ಕರೆ ನೀಡುತ್ತೇವೆ ಎಂದು ಹೇಳಿದರು.

ಹಾಗೆಯೇ ನಾನು ಕಿಂಗ್‌ ಪಿನ್‌ ಅಂದು ಯಾರ ಹೆಸರನ್ನೂ ಹೇಳಿರಲಿಲ್ಲ,ಆದರೆ ಸೋಮಶೇಖರ್‌ ಯಾಕೆ ಹೆಗಲು ಮುಟ್ಟಿಕೊಂಡರು ಎಂದು ಸಿಎಂ ಹೆಚ್.ಡಿ ಕುಮಾರಸ್ವಾಮಿ ಪ್ರಶ್ನಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: