ಸುದ್ದಿ ಸಂಕ್ಷಿಪ್ತ

ಸೆ.24ರಂದು ಕಾಂತರಾಜೇ ಅರಸ್ ಜಯಂತಿ ಹಾಗೂ ಚಾಮರಾಜೇಂದ್ರ ಒಡೆಯರ್ ಪುಣ್ಯಸ್ಮರಣೆ

ಮೈಸೂರು,ಸೆ.20 : ತ್ಯಾಗರಾಜರಸ್ತೆಯಲ್ಲಿರುವ ಅರಸು ಮಂಡಲಿ ಸಂಘದ ವತಿಯಿಂದ ಸರ್ದಾರ್ ಎಂ.ಕಾಂತರಾಜೇ ಅರಸ್ ಅವರ ಜಯಂತಿ ಹಾಗೂ ಜಯಚಾಮರಾಜೇಂದ್ರ ಒಡೆಯರ್ ಅವರ ಪುಣ್ಯಸ್ಮರಣೆಯನ್ನು  ಏರ್ಪಡಿಸಲಾಗಿದೆ.

ಸೆ.24ರ ಸಂಜೆ 6 ಗಂಟೆಗೆ  ಜಯಂತಿ ಹಾಗೂ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಯಲಿದ್ದು, ಬಳಿಕ 6.30 ರಿಂದ ಬೆಳದಿಂಗಳ ಸಂಗೀತ ಸಂಜೆ ಕಾರ್ಯಕ್ರಮವಿದೆ. ಮುಂದಿನ ಅ.2ರಂದು ಬೆಳಗ್ಗೆ 10 ಗಂಟೆಗೆ ಗಾಂಧಿ ಜಯಂತಿಯನ್ನು ಆಚರಿಸಲಾಗುವುದು ಎಂದು ಅರಸು ಮಂಡಳಿ ಸಂಘದ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: