
ಮೈಸೂರು
ಹಿಂದು-ಮುಸ್ಲಿಂ-ಕ್ರೈಸ್ತರಿಂದ ಸೌಹಾರ್ದಯುತ ಕ್ರಿಸ್ಮಸ್ ಆಚರಣೆ
ಕ್ರಿಸ್ಮಸ್ ಹಬ್ಬದ ಅಂಗವಾಗಿ ಕೆ.ಎಂ.ಪಿ.ಕೆ. ಟ್ರಸ್ಟ್ ನ ವತಿಯಿಂದ ಮೈಸೂರಿನ ಎಂ.ಜಿ. ರಸ್ತೆಯಲ್ಲಿ ರುವ ಸಿ.ಎಸ್.ಐ, ದೇವಾಲಯದ ಮುಂಭಾಗ ಬಡವರು, ಮತ್ತು ಮಕ್ಕಳಿಗೆ ಚರ್ಚ್ ನ ಪಾದ್ರಿ ವಿಕ್ಟರ್ ಕೇಕ್ ಕಟ್ ಮಾಡಿ ಸಿಹಿ ತಿನ್ನಿಸಿದರು.
ಬಳಿಕ ಮಾತನಾಡಿದ ಅವರು ದೇಶಕ್ಕೆ ಸಂಭ್ರಮದ ದಿನ ಏಕೆಂದರೆ ಮಾನವನ ತಪ್ಪು ಮತ್ತು ಮಾನವರ ಪರಿವರ್ತನೆ ಯುಗವನ್ನು ಕುರಿ ಸಾಕಾಣಿಕೆಯ ಜಾಗದಲ್ಲಿ ಜನ್ಮ ತಳೆದ, ಈ ಪ್ರಪಂಚದ ಕಣ್ಣು ತೆರೆಸಿದ ಮಾನವತವಾದಿಯ ಜನನದ ಈ ಸಂದರ್ಭದಲ್ಲಿ ಕೆ.ಎಂ.ಪಿ.ಕೆ. ಚಾರಿಟಬಲ್ ಟ್ರಸ್ಟ್ ನ ಪದಾಧಿಕಾರಿಗಳು ನಿರ್ಗತಿಕರೊಂದಿಗೆ ಆಚರಿಸಿ ಈ ನಾಡಿಗೆ ಮಾದರಿಯಾಗಿದ್ದರೆ ಎಂದು ಅಭಿಪ್ರಾಯಪಟ್ಟರು.
ನಂತರ ಕಾಂಗ್ರೆಸ್ ಮುಖಂಡ ಕಲಿಂ ಷರೀಫ್ ಮಾತನಾಡಿ ನಮ್ಮಲ್ಲಿ ಯಾವುದೇ ರೀತಿಯಾದ ಭೇದ ಭಾವವಿಲ್ಲ. ನಾವೆಲ್ಲರೂ ಅಣ್ಣ ತಮ್ಮಂದಿರಾಗಿ ಒಟ್ಟಾಗಿದ್ದು ಈ ಹಬ್ಬವನ್ನು ಆಚರಿಸುತ್ತಿರುವುದು ನಮಗೆ ಸಂತೋಷ ತಂದಿದೆ. ನಾವು ದೇವರನ್ನು ಈ ಮಕ್ಕಳ ರೂಪದಲ್ಲಿ ನೊಡೋಣ ಎಂದು ತಿಳಿಸಿದರು.
ಈ ಸಂದರ್ಭ ನಗರಪಾಲಿಕೆ ಸದಸ್ಯ ಮಾ.ವಿ. ರಾಮಪ್ರಸಾದ್, ನಗರ ಅಲ್ಪಸಂಖ್ಯಾತ ಮೊರ್ಚಾ ಆಧ್ಯಕ್ಷ ಅನಿಲ್ ಥಾಮಸ್, ವಿಕ್ರಮ್ ಅಯ್ಯಂಗಾರ್, ಬಿ.ಜೆ.ಪಿ. ಮುಖಂಡರಾದ ಜೋಗಿ ಮಂಜು, ಆನಂದ್, ಅಶೋಕ್, ಜಯ ಕರ್ನಾಟಕ ಯುವ ಅಧ್ಯಕ್ಷ ಅಜಯ್ ಶಾಸ್ತಿ, ಜೆ.ಡಿ.ಎಸ್. ಮುಖಂಡ ಬಸವರಾಜು, ಸಮೀ ಉಲ್ಲಾ, ಜಾಕೀರ್, ರಾಕೇಶ್ ಮತ್ತಿತರರು ಉಪಸ್ಥಿತರಿದ್ದರು.