ಸುದ್ದಿ ಸಂಕ್ಷಿಪ್ತ

ಏಜೆಂಟ್ ನೇಮಕ: ನೇರ ಸಂದರ್ಶನ

ಮೈಸೂರು,ಸೆ.21-ಅಂಚೆ ಜೀವ ವಿಮೆ ಹಾಗೂ ಗ್ರಾಮೀಣ ಅಂಚೆ ಜೀವ ವಿಮೆಯನ್ನು ಸಾರ್ವಜನಿಕರಿಗೆ ತಲುಪಿಸುವ ಸಲುವಾಗಿ ಏಜೆಂಟ್  ನೇಮಕ ಮಾಡಲು ಅಕ್ಟೋಬರ್ 16 ರಂದು ಬೆಳಿಗ್ಗೆ 11 ಗಂಟೆಗೆ ಮೈಸೂರು ಹಿರಿಯ ಅಂಚೆ ಅಧೀಕ್ಷಕರ ಕಚೇರಿ ಯಾದವಗಿರಿ ಇಲ್ಲಿ ನೇರ ಸಂದರ್ಶನ ನಡೆಯಲಿದೆ.

ನೇರ ಸಂದರ್ಶನಲ್ಲಿ ಪಾಲ್ಗೊಳ್ಳಲು ಇಚ್ಫಿಸುವ ಅಭ್ಯರ್ಥಿಗಳು ಜನ್ಮ ದಿನಾಂಕ ಮತ್ತು ವಿದ್ಯಾರ್ಹತೆಯ ಪ್ರಮಾಣ ಪತ್ರಗಳನ್ನು ತರತಕ್ಕದ್ದು, ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ಸಂಸ್ಥೆಯಲ್ಲಿ 12ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. 18 ರಿಂದ 60 ವರ್ಷದೊಳಗಿರಬೇಕು.

ಸಂದರ್ಶನದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಯಾವುದೇ ನಿಗಧಿತ ಸ್ಥಿರ ವೇತನ ಕೊಡಲಾಗುವುದಿಲ್ಲ ಬದಲಾಗಿ ಅಂಚೆ ಜೀವ ವಿಮೆ ಹಾಗೂ ಗ್ರಾಮೀಣ ಅಂಚೆ ಜೀವ ವಿಮೆ ಮಾಡಿಸಿರುವ ವ್ಯವಹಾರದ ಆಧಾರದ ಮೇಲೆ ಇನ್ಸೆಂಟಿವ್ ಹಣವನ್ನು ಕೊಡಲಾಗುವುದು. ಹೆಚ್ಚಿನ ಮಾಹಿತಿಗೆ ದೂ.ಸಂ. 0821-2417307/ 2417308 ಅನ್ನು ಸಂಪರ್ಕಿಸಬಹುದು. (ಎಂ.ಎನ್)

Leave a Reply

comments

Related Articles

error: