ಸುದ್ದಿ ಸಂಕ್ಷಿಪ್ತ

ಮೂಲ ಸಾಕ್ಷರತಾ ಕಾರ್ಯಕ್ರಮ: ಸ್ವಯಂಸೇವಾ ಸಂಸ್ಥೆಗಳಿಂದ ಅರ್ಜಿ ಆಹ್ವಾನ

ಮೈಸೂರು,ಸೆ.21-ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳ ಕಚೇರಿ ವತಿಯಿಂದ ಮೂಲ ಸಾಕ್ಷರತಾ ಕಾರ್ಯಕ್ರಮದ 2018-19ನೇ ಸಾಲಿನ ಅನುಷ್ಠಾನ ಮತ್ತು ಸೂಕ್ತ ಪರಿವೀಕ್ಷಣೆಗಾಗಿ ಸರ್ಕಾರದಿಂದ ಅಂಗೀಕೃತವಾದ ಸ್ವಯಂಸೇವಾ ಸಂಸ್ಥೆಗಳನ್ನು ಆಹ್ವಾನಿಸಲಾಗಿದೆ.

ಮೈಸೂರು ಜಿಲ್ಲೆಯ ಏಳು ತಾಲ್ಲೂಕಿನ ಆಯ್ದ 17 ಗ್ರಾಮ ಪಂಚಾಯತಿಗಳಲ್ಲಿ 15 ವರ್ಷ ಮೇಲ್ಪಟ್ಟ ವಯಸ್ಕ ಒಟ್ಟು 3910 ಅನಕ್ಷರಸ್ಥರಿಗೆ ಓದು, ಬರಹ, ಸರಳ ಲೆಕ್ಕಾಚಾರ  ಮತ್ತು ಸ್ವಾವಲಂಬನೆಗಾಗಿ ಕನಿಷ್ಠ ವ್ಯವಹಾರ ಕೌಶಲಗಳನ್ನು ನೀಡುವುದು ಮೂಲ ಸಾಕ್ಷರತಾ ಕಾರ್ಯಕ್ರಮದ ಉದ್ದೇಶವಾಗಿದೆ.

ಲೋಕ ಶಿಕ್ಷಣ ನಿರ್ದೇಶನಾಲಯದ ಮಾರ್ಗಸೂಚಿಯಂತೆ ಅನಕ್ಷರಸ್ಥರ ಸಮೀಕ್ಷೆಗೆ ತಲಾ 3.00 ರೂ. ಹಾಗೂ ಪ್ರತಿ ಕಲಿಕಾರ್ಥಿಗೆ 90.00 ರೂ. ರಂತೆ ಪ್ರೋತ್ಸಾಹಧನವನ್ನು ಬೋಧಕರಿಗೆ ಹಾಗೂ ಸ್ವಯಂಸೇವಾ ಸಂಸ್ಥೆಗಳಿಗೆ ಎಲ್ಲಾ ಅಗತ್ಯ ವ್ಯವಸ್ಥೆ ಮಾಡಲು ಮತ್ತು ಸೂಕ್ತ ಪರಿವೀಕ್ಷಣೆಗಾಗಿ ಪ್ರತಿ ಕಲಿಕಾರ್ಥಿಗೆ 10.00 ರೂ. ರಂತೆ ಪ್ರೋತ್ಸಾಹಧನವನ್ನು ನೀಡಲಾಗುವುದು.

ಕಲಿಕಾರ್ಥಿಗಳಿಗೆ ಕಲಿಕಾ ಬೋಧನಾ ಸಾಮಾಗ್ರಿಗಳು ಹಾಗೂ ಬೋಧಕರಿಗೆ ತರಬೇತಿಯನ್ನು ಇಲಾಖೆಯ ವತಿಯಿಂದಲೇ ನೀಡಲಾಗುವುದು. ಆದ್ದರಿಂದ ಆಸಕ್ತ ಸರ್ಕಾರದಿಂದ ಅಂಗೀಕೃತವಾದ ಸ್ವಯಂಸೇವಾಸಂಸ್ಥೆಗಳು ತಮ್ಮ ಮೂಲ ದಾಖಲೆಗಳೊಂದಿಗೆ ಅಕ್ಟೋಬರ್ 1 ರಂದು ಬೆಳಿಗ್ಗೆ11.30 ಗಂಟೆಗೆ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳನ್ನು ಸಂಪರ್ಕಿಸಬೇಕಾಗಿ ಕೋರಿದೆ. (ಎಂ.ಎನ್)

Leave a Reply

comments

Related Articles

error: