ಸುದ್ದಿ ಸಂಕ್ಷಿಪ್ತ

ವಿದ್ಯಾರ್ಥಿ ವೇತನ: ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ

ಮಂಡ್ಯ (ಸೆ.20): 2018-19ನೇ ಸಾಲಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಪ್ರಥಮ ಬಾರಿಗೆ ಪ್ರಥಮ ಶ್ರೇಣಿಯಲ್ಲಿ ಅಂತಿಮ ವರ್ಷದ ತರಗತಿಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಆಗಸ್ಟ್ 31 ರಂದು ಕೊನೆಯ ದಿನಾಂಕ ನಿಗಧಿಪಡಿಸಲಾಗಿತ್ತು.
ಪ್ರಸ್ತುತ ಅರ್ಜಿ ಆಹ್ವಾನದ ಅವಧಿಯನ್ನು ಅಕ್ಟೋಬರ್ 31 ರವರೆಗೆ ವಿಸ್ತರಿಸಲಾಗಿದ್ದು, ಇದುವರೆವಿಗೂ ಅರ್ಜಿ ಸಲ್ಲಿಸದೆ ಇರುವ ವಿದ್ಯಾರ್ಥಿಗಳು ಕೂಡಲೇ ಇಲಾಖೆಯ ವೆಬ್‍ಸೈಟ್  ಅರ್ಜಿ ಸಲ್ಲಿಸಲು ಹಾಗೂ ಆನ್‍ಲೈನ್‍ನಲ್ಲಿ ಸಲ್ಲಿಸಿದ ಅರ್ಜಿಯ ಪ್ರತಿಗಳನ್ನು ಆಯಾಯ ತಾಲ್ಲೂಕಿನ ಸಹಾಯಕ ನಿರ್ದೇಶಕರ ಕಛೇರಿ, ಸಮಾಜ ಕಲ್ಯಾಣ ಇಲಾಖೆಗೆ ಸಲ್ಲಿಸಬೇಕು. (ಎನ್.ಬಿ)

Leave a Reply

comments

Related Articles

error: