ಸುದ್ದಿ ಸಂಕ್ಷಿಪ್ತ

ವಿವಿಧ ಪ್ರಶಸ್ತಿಗಳಿಗಾಗಿ ಅರ್ಜಿ ಆಹ್ವಾನ

ಮಂಡ್ಯ (ಸೆ.21): ಕ್ರೀಡಾ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಕ್ರೀಡೆಯ ಅಭಿವೃದ್ದಿಗೆ ನೆರವು ನೀಡಿ 5 ವರ್ಷಗಳಲ್ಲಿ ರಾಜ್ಯ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕ್ರೀಡಾ ಕ್ಷೇತ್ರದಲ್ಲಿ ಕೊಡುಗೆ ನೀಡಿದ, ಕ್ರಿಮಿನಲ್ ಹಿನ್ನೆಲೆ ಇಲ್ಲದ, ಕರ್ನಾಟಕ ನಿವಾಸಿಗಳಾದ ಹಾಗೂ ರಾಜ್ಯದ ಕ್ರೀಡಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಕ್ರೀಡಾ ಪೋಷಕರು ಕ್ರೀಡಾ ಪೋಷಕ ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದು.

ಖೊ-ಖೊ, ಕಬ್ಬಡಿ, ಥ್ರೋಬಾಲ್, ಆಟ್ಯಾಪಾಟ್ಯಾ, ಮಲ್ಲಕಂಬ, ಬಾಲ್ ಬ್ಯಾಡ್ಮಿಂಟನ್, ಯೋಗ, ಗುಂಡು, ದೊಣ್ಣೆ ವರಸೆ, ಮಟ್ಟಿಕುಸ್ತಿ, ಜಂಗಿಕುಸ್ತಿ, ಟೆನಿಕಾಯಿಟ್, ಕೇರಂ ಕ್ರೀಡೆಗಳಿಗೆ ಸಂಬಂಧಿಸಿದಂತೆ ರಾಷ್ಟ್ರ ಮತ್ತು ಅಂತರಾಷ್ಟ್ರ ಮಟ್ಟದ ಕ್ರೀಡೆಗಳಲ್ಲಿ ರವರೆಗೆ 5 ವರ್ಷಗಳ ಅತ್ಯುತ್ತಮ ಸಾಧನೆ ಮಾಡಿದ ಅರ್ಹ ಕ್ರೀಡಾಪಟುಗಳು “ಕರ್ನಾಟಕ ಕ್ರೀಡಾ ರತ್ನ” ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದು.

ಅಂಗೀಕೃತ ಕ್ರೀಡೆಗಳಲ್ಲಿ 2017ನೇ ವರ್ಷದಲ್ಲಿ ಹಾಗೂ ಹಿಂದಿನ ನಾಲ್ಕು ವರ್ಷಗಳಲ್ಲಿ ಅಸಾಧಾರಣ ಪ್ರತಿಭೆಯನ್ನು ಗಳಿಸಿರುವ ಅರ್ಹತೆಯುಳ್ಳ ಕ್ರೀಡಾಪಟುಗಳಿಗೆ “ಏಕಲವ್ಯ ಪ್ರಶಸ್ತಿ”ಯನ್ನು ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಕ್ರೀಡಾಪಟುವಾಗಿ/ತರಬೇತುದಾರರಾಗಿ ನಿರಂತರ ಸೇವೆ ಸಲ್ಲಿಸಿ ಸಾಧನೆ ಮಾಡಿದಂತಹ ಹಿರಿಯ ಕ್ರೀಡಾಪಟು/ ತರಬೇತುದಾರರಿಗೆ “ಜೀವನ ಪರ್ಯಂತ ಸಾಧನಾ ಪ್ರಶಸ್ತಿ” ನೀಡಿ ಸನ್ಮಾನಿಸಲಾಗುವುದು.

ಅರ್ಹತೆಯುಳ್ಳ ಆಸಕ್ತರು ನಿಗದಿತ ನಮೂನೆಯನ್ನು ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಡ್ಯ ಈ ಕಛೇರಿಯಲ್ಲಿ ಪಡೆದುಕೊಂಡು, ಭರ್ತಿ ಮಾಡಿದ ಎಲ್ಲ ದಾಖಲಾತಿಗಳನ್ನು ಒಳಗೊಂಡ ಅರ್ಜಿಯನ್ನು ಸೆ.25 ರೊಳಗೆ ಸಹಾಯಕ ನಿರ್ದೇಶಕರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಡ್ಯ ಇವರಿಗೆ ಸಲ್ಲಿಸಬಹುದು. (ಎನ್.ಬಿ)

Leave a Reply

comments

Related Articles

error: