ಸುದ್ದಿ ಸಂಕ್ಷಿಪ್ತ

ಸೆ.27 : ಡಿಜಿಟಲ್ ಶ್ರವಣ ಸಾಧನಗಳ ಕುರಿತು ಕಾರ್ಯಾಗಾರ

ಮೈಸೂರು,ಸೆ.21;- ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ಆಡಿಯಾಲಜಿ ವಿಭಾಗದ ವತಿಯಿಂದ ಸೆ.27ರಂದು ಡಿಜಿಟಲ್ ಶ್ರವಣ ಸಾಧನಗಳ ಕುರಿತು ಕಾರ್ಯಾಗಾರ ಆಯೋಜಿಸಲಾಗಿದೆ.

ಡಿಜಿಟಲ್ ಶ್ರವಣ ಸಾಧನಗಳ ಬಳಕೆ, ನಿರ್ವಹಣೆ ಕುರಿತು ಮಾಹಿತಿ ನೀಡಲಾಗುತ್ತದೆ. ಡಿಜಿಟಲ್ ಶ್ರವಣ ಸಾಧನ ಬಳಸುತ್ತಿರುವವರು ಕಾರ್ಯಾಗಾರದಲ್ಲಿ ಪಾಲ್ಗೊಳ್ಳಬಹುದು. ಆಸಕ್ತರು ಸೆ.24ರೊಳಗೆ ಹೆಸರು ನೋಂದಾಯಿಸಬೇಕಿದ್ದು, ದೂ.ಸಂ.0821-2502576ನ್ನು ಸಂಪರ್ಕಿಸಲು ಕೋರಲಾಗಿದೆ. (ಎಸ್.ಎಚ್)

Leave a Reply

comments

Related Articles

error: