ಮೈಸೂರು

ಡಾ. ಇಮ್ಮಡಿ ಶಿವಬಸವಸ್ವಾಮಿಗಳ ಸಂಸ್ಮರಣಾ ಸಮಾರಂಭ

ಮೈಸೂರಿನ ಕುಂದೂರು ಮಠದ ಶ್ರೀ ಗದ್ದುಗೆ ಪ್ರಭುದೇವ ವಿದ್ಯಾರ್ಥಿ ನಿಲಯದಲ್ಲಿ ಡಾ. ಇಮ್ಮಡಿ ಶಿವಬಸವಸ್ವಾಮಿ ಅವರ ಸಂಸ್ಮರಣಾ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮವನ್ನು ಸುತ್ತೂರು ಶ್ರೀ ಕ್ಷೇತ್ರದ   ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಉದ್ಘಾಟಿಸಿದರು. ಬಳಿಕ ಮಾತನಾಡಿದ  ಅವರು ಪೂಜ್ಯರು ಮತ್ತು ಡಾ. ರಾಜೇಂದ್ರಮಹಾಸ್ವಾಮಿಗಳ ನಡುವಿನ ಆತ್ಮೀಯ ಸಂಬಂಧವನ್ನು ಸ್ಮರಿಸಿದರು. ಇದೇ ಸಂದರ್ಭದಲ್ಲಿನುಡಿ ಸೊಡರು  ಗ್ರಂಥವನ್ನು ಸಂಸ್ಕೃತ ವಿಶ್ವವಿದ್ಯಾನಿಲಯದ  ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್  ಲೋಕಾರ್ಪಣೆಗೊಳಿಸಿದರು. ನಂತರ ಮಾತನಾಡಿ ಶ್ರೀಗಳು ಸಂಸ್ಕೃತ ಮತ್ತು ವಚನಸಾಹಿತ್ಯಕ್ಕೆ ಸಲ್ಲಿಸಿದ ಸೇವೆಯನ್ನುಸ್ಮರಿಸಿದರು.

ಸಂಸ್ಕೃತ ಮತ್ತು ವಚನ ಸಾಹಿತ್ಯದಲ್ಲಿ ಇಂದು ಸಂಶೋಧನೆ ಮಾಡುವವರು ಬಹಳ ಕಡಿಮೆ. ಅದರಲ್ಲೆ ತಮ್ಮ ಜೀವನವನ್ನೇ ತೊಡಗಿಸಿಕೊಂಡಂತಹ ಮಹಾನ್ ಮೇಧಾವಿಗಳು ಡಾ. ಶ್ರೀ ಇಮ್ಮಡಿ ಶಿವಬಸವಸ್ವಾಮಿಗಳು ಇಂದು ನೆನಪು ಮಾತ್ರ ಎಂದರು. ಅಧ್ಯಕ್ಷತೆ ವಹಿಸಿದ್ದ ಬೇಲಿಮಠದ ಶಿವಾನುಭವ ಚರಮೂರ್ತಿ  ಶಿವರುದ್ರಸ್ವಾಮಿಗಳು ಮಾತನಾಡಿ  ಶ್ರೀಗಳು ಸಾಹಿತ್ಯಕವಾಗಿ, ಧಾರ್ಮಿಕವಾಗಿ ಹಾಗೂ ಸಾಮಾಜಿಕವಾಗಿ ನೀಡಿರುವ ಕೊಡುಗೆಗಳನ್ನು ಸ್ಮರಿಸಿದರು.  ಶ್ರೀ ಸಿದ್ಧಗಂಗಾ ಮಠದ ಕಿರಿಯ ಸಿದ್ಧಲಿಂಗ ಮಹಾಸ್ವಾಮಿಗಳು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಕುಂದೂರು ಮಠದ ಹಿರಿಯ ವಿದ್ಯಾರ್ಥಿಗಳ ಸಂಘವನ್ನು ಉದ್ಘಾಟಿಸಲಾಯಿತು ಹಾಗೂ ವಿದ್ಯಾರ್ಥಿನಿಲಯದ ಭೂಮಿಪೂಜೆಯನ್ನು ನೆರವೇರಿಸಲಾಯಿತು.

Leave a Reply

comments

Related Articles

error: