ಮೈಸೂರು

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ದಿನಗೂಲಿ ನೌಕರರಿಂದ ಪ್ರತಿಭಟನೆಯ ಎಚ್ಚರ

ಮೈಸೂರು,ಸೆ.21 : ದಿನಗೂಲಿ ನೌಕರರ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆಗೆ ಮುಂದಾಗಿರುವುದಾಗಿ ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಲದ ಮೈಸೂರು, ಚಾಮರಾಜನಗರ ಜಿಲ್ಲಾ ಸಂಚಾಲಕ ಜಿ.ರಮೇಶ್ ತಿಳಿಸಿದರು.

ದಿನಗೂಲಿ ನೌಕರರ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು ಇದುವರೆಗೂ ಯಾವುದೇ ಸ್ಪಂಧನೆ ದೊರೆತಿಲ್ಲ ಹೀಗಾಗಿ ಸೆ.30ರಂದು ಹುಬ್ಬಳ್ಳಿಯಲ್ಲಿ ಆಯೋಜಿಸಿರುವ ಮಂಡಲದ ವಿಶೇಷ ಕಾರ್ಯಕಾರಿ ಸಮಿತಿಯಲ್ಲಿ ಹೋರಾಟದ ರೂಪುರೇಷೆಗಳನ್ನು ನಿರ್ಧರಿಸಲಾಗುವುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಿರಂತರ ಹೋರಾಟದ ಫಲವಾಗಿ ಜಗದೀಶ್ ಅವರು ಮುಖ್ಯಮಂತ್ರಿಯಾಗಿದ್ದಾಗ ಹಲವು ಬೇಡಿಕೆಗಳಿಗೆ ಸ್ಪಂದಿಸಿ ಸೌಲಭ್ಯ ಜಾರಿಗೊಳಿಸಿದ್ದರು. ಆದರೆ ಅವುಗಳನ್ನು ಸಂಪೂರ್ಣವಾಗಿ ಜಾರಿಗೊಳಿಸಲು ಇದುವರೆಗೂ ಸಾಧ್ಯವಾಗಿಲ್ಲ, 6ನೇ ವೇತನ ಆಯೋಗದಲ್ಲಿ ಗ್ರೂಪ್ ‘ಡಿ’ ‘ಸಿ’ ನೌಕರರಿಗೆ 2018ರ ಏಪ್ರಿಲ್ 1ರಿಂದ ಪೂರ್ವನ್ವಯವಾಗುವಂತೆ ಮೂಲವೇತನವನ್ನು ಹೆಚ್ಚಿಸಬೇಕು, ಶೇ.100ರಷ್ಟು ತುಟ್ಟಿ ಭತ್ಯೆ, ಬಾಡಿಗೆ ಭತ್ಯೆ ಹೆಚ್ಚಿಸಬೇಕೆಂದು ಒತ್ತಾಯಿಸಿದರು.

ನೂತನ ವೇತನ ಶ್ರೇಣಿ ಜಾರಿಗೊಳಿಸಿ ಬಡ್ತಿ ಮಂಜೂರು ಮಾಡಬೇಕು, ಮೂರು ವರ್ಷಗಳಿಗೊಮ್ಮೆ ವಾರ್ಷಿಕ ಬಡ್ತಿ, ಬಾಕಿ ವೇತನ, ಗಳಿಕೆ ರಜೆ, ನಗದೀಕರಣ, ಸೇವಾವಧಿಯಲ್ಲಿ ಮೃತಪಟ್ಟರೆ ಅನುಕಂಪದ ಆಧಾರದಲ್ಲಿ ನೌಕರಿ, ಏಕ್ಸ್ ಗ್ರೇಷಿಯಾ, ಪಿಂಚಣಿ ಯೋಜನೆ ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.

ಪದಾಧಿಕಾರಿಗಳಾದ ಜಗದೀಶ್, ಸಿದ್ದಯ್ಯ, ಗಂಗಾಧರ್, ಜಯಶಂಕರ್, ರಂಗೇಗೌಡ ಮತ್ತಿತರರು ಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: