ಮೈಸೂರು

ಸಡಗರ ಸಂಭ್ರಮದಿಂದ ಕ್ರಿಸ್ಮಸ್ ಆಚರಣೆ

church-2ವಿಶ್ವಕ್ಕೆ ಶಾಂತಿಯ ಸಂದೇಶವನ್ನು ಸಾರಿದ ಶಾಂತಿದೂತ ಯೇಸು ಕ್ರಿಸ್ತನ ಜನ್ಮದಿನಾಚರಣೆಯನ್ನು ಕ್ರೈಸ್ತರು ಸಡಗರ ಸಂಭ್ರಮದಿಂದ ಆಚರಿಸಿದರು.

ಮೈಸೂರಿನ ಐತಿಹಾಸಿಕ ಸಂತ ಫಿಲೋಮಿನಾ ಚರ್ಚ್ ಸೇರಿದಂತೆ ನಗರದ ವಿವಿಧ ಕಡೆಗಳಲ್ಲಿರುವ ಕ್ರೈಸ್ತ ದೇವಾಲಯಗಳಲ್ಲಿ ಅತ್ಯಂತ ಶ್ರದ್ದಾ, ಭಕ್ತಿಯಿಂದ ಕ್ರಿಸ್‍ಮಸ್ ಹಬ್ಬವನ್ನು ಆಚರಿಸಲಾಯಿತು. ಕ್ರೈಸ್ತ ಬಾಂಧವರು ಚರ್ಚ್‍ಗಳಿಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಸಂತ ಫಿಲೋಮಿನಾ ಚರ್ಚ್‍ನಲ್ಲಿ ಕ್ರೈಸ್ತ ಧರ್ಮಗುರು ಬಿಷಪ್ ಥಾಮಸ್ ಅಂಥೋಣಿ ವಾಳಪಿಳ್ಳೈ ಸಮ್ಮುಖದಲ್ಲಿ ಮಿಡ್‍ನೈಟ್ ಮಾಸ್ ನಡೆಯಿತು . ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಬಳಿಕ ಕ್ರೈಸ್ತ ಬಾಂಧವರು ಯೇಸು, ಸಂತ ಜೋಸೆಫ್, ಸಂತ ಮೇರಿ ಪ್ರತಿಮೆ ಎದುರು ಮೇಣದ ಬತ್ತಿಗಳನ್ನು ಹಚ್ಚಿ ಪ್ರಾರ್ಥನೆ ಸಲ್ಲಿಸಿ ಯೇಸು ಕ್ರಿಸ್ತನ ಸ್ಮರಣೆ ಮಾಡಿದರು.

ಕ್ರಿಸ್‍ಮಸ್ ಅಂಗವಾಗಿ ಚರ್ಚ್‍ನಲ್ಲಿ ವಿಶೇಷವಾದ ಅಲಂಕಾರ ಮಾಡಲಾಗಿತ್ತು. ಚರ್ಚ್‍ನಲ್ಲಿ ಇರಿಸಲಾಗಿದ್ದ ಕ್ರಿಸ್ತನ ಜನನ ಸಾರುವ ಗೋದಲಿಗಳು ಮಕ್ಕಳು ಸೇರಿದಂತೆ ಎಲ್ಲರನ್ನು ಆಕರ್ಷಿಸಿತು.

ಮೈಸೂರು ಮಾತ್ರವಲ್ಲದೇ ರಾಜ್ಯ, ಹೊರ ರಾಜ್ಯ, ವಿದೇಶಗಳಿಂದಲೂ ಆಗಮಿಸಿದ ಜನರು ಕ್ರಿಸ್ ಮಸ್ ಸಡಗರದಲ್ಲಿ ಪಾಲ್ಗೊಂಡರು. ಕೆಲವರು ಚರ್ಚ್ ಎದುರು ಇರಿಸಲಾದ ಸಾಂತಾಕ್ಲಾಸ್ ಗೊಂಬೆಗಳ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿರುವುದು ಕಂಡು ಬಂತು.

Leave a Reply

comments

Related Articles

error: