ಮೈಸೂರು

ಸೆ.23ರಂದು ಜಾಗತಿಕ ಲಿಂಗಾಯಿತಿ ಮಹಾಸಭಾದ ಜಿಲ್ಲಾ ಕಚೇರಿ ಉದ್ಘಾಟನೆ

ಪುಸ್ತಕಗಳ ಬಿಡುಗಡೆ ಹಾಗೂ ಸಂವಾದ

ಮೈಸೂರು,ಸೆ.21 : ಜಾಗತಿಕ ಲಿಂಗಾಯಿತ ಮಹಾಸಭಾದ ಜಿಲ್ಲಾ ಕಚೇರಿ ಉದ್ಘಾಟನೆ ಸೆ.23ರಂದು ನಡೆಯಲಿದೆ ಎಂದು ಸಭಾದ ರಾಜ್ಯ ಕಾರ್ಯದರ್ಶಿ ಮಹದೇವಪ್ಪ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹೊಸಮಠದ ನಟರಾಜ ಕಲ್ಯಾಣ ಮಂಟಪದಲ್ಲಿ ಅಂದು ಸಂಜೆ 4ಕ್ಕ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಶ್ರೀ ಚಿದಾನಂದ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದು, ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಎಂ.ಜಾಮಾದಾರ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಲಿಂಗಾಯಿತ ಧರ್ಮದ ಬಗ್ಗೆ ಗೊಂದಲಗಳಿಗೆ ಸಮರ್ಪಕ ಉತ್ತರ ನೀಡುವ ಕಿರು ಪುಸ್ತಕಗಳನ್ನು ಬಿಡುಗಡೆಗೊಳಿಸಲಾಗುವುದು, ಲಿಂಗಾಯಿತ ಹೋರಾಟ ಪ್ರಶ್ನೆ-ಪರಿಹಾರ ಕೃತಿಯನ್ನು  ಮುಡಿಗುಂಡ ವಿರಕ್ತಮಠದ ಶ್ರೀ ಶ್ರೀಕಂಠಸ್ವಾಮೀಜಿ, ಲಿಂಗಾಯಿತ ಹೋರಾಟ ಹಿಂದೂ ವಿರೋಧಿಯೇ? ಮತ್ತು ದೇಶ ವಿರೋಧಿಯೇ ಕೃತಿಯನ್ನು ನೀಲಕಂಠ ಮಠದ ಶ್ರೀ ಸಿದ್ದಮಲ್ಲ ಸ್ವಾಮೀಜಿ, ಲಿಂಗಾಯತ್ ಸ್ಟ್ರಗಲ್ ಇಸ್ ಇಟ್ ಆನ್ಟಿ ಹಿಂದೂ, ಆನ್ಟಿ ಇಂಡಿಯನ್ ಕೃತಿಯನ್ನು ಮುರುಘಮಠದ ಬಸವ ಕೇಂದ್ರದ ಶ್ರೀ ಮೋಕ್ಷಪತಿ ಸ್ವಾಮೀಜಿ ಬಿಡುಗಡೆಗೊಳಿಸಲಿದ್ದು ಮಹಾಸಭಾದ ಸದಸ್ಯರಿಗೆ ಚಿಕ್ಕಮಗಳೂರು ಬಸವಕೇಂದ್ರದ ಶ್ರೀ ಬಸವಯೋಗಿ ಪ್ರಭುಗಳು  ಗುರುತಿನ ಚೀಟಿ ವಿತರಿಸುವರು ಎಂದು ಹೇಳಿದರು.

ಲಿಂಗಾಯಿತ ಹೋರಾಟವೂ ಹಿಂದೂಗಳಿಗೆ ವಿರುದ್ಧವಾಗಿದೆಯೇ? ಲಿಂಗಾಯಿತರು ಧರ್ಮ ಒಡೆಯುತ್ತಿದ್ದಾರೆ ? ಅಲ್ಪ ಸಂಖ್ಯಾತ ಧರ್ಮದ ಮಾನ್ಯತೆ ಅಗತ್ಯವಿಲ್ಲವೇ ಇತ್ಯಾದಿ ಪ್ರಶ್ನೆಗಳಿಗೆ ಸಮಾರಂಭದಲ್ಲಿ ಉತ್ತರ ನೀಡಲಾಗುವುದು, ನಮ್ಮ ಹೋರಾಟದ ಬಗ್ಗೆ ಮಾಧ್ಯಮಗಳಲ್ಲಿ ತಪ್ಪಾಗಿ ಅರ್ಥೈಸಲಾಗುತ್ತಿದ್ದು ಜನಸಾಮಾನ್ಯರಿಗೆ ಉಂಟಾಗಿರುವ ಗೊಂದಲವನ್ನು ಬಗೆಹರಿಸುವ ಉದ್ದೇಶ ಹೊಂದಿರುವುದಾಗಿ ಅವರು ಹೇಳಿದರು.

ಪದಾಧಿಕಾರಿಗಳಾದ ಶಿವಲಿಂಗಪ್ಪ, ಅಂಬಳೆ ಶಿವಾನಂದಸ್ವಾಮಿ, ಲೋಕೇಶ್, ಮಂಜುನಾಥ್, ಭರತ್ ಕುಮಾರ್, ಶಶಿಕುಮಾರ್ ಹಾಜರಿದ್ದರು.

Leave a Reply

comments

Related Articles

error: