ಮೈಸೂರು

ರವಿವರ್ಮ ಚಿತ್ರಕಲಾ ಶಾಲೆಯಿಂದ ಭಾವಶಿಲ್ಪ ಪ್ರಾತ್ಯಕ್ಷಿಕೆ’ ನಾಳೆ

ಮೈಸೂರು,ಸೆ.21 : ರವಿವರ್ಮನ ಚಿತ್ರಕಲಾ ಶಾಲೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ‘ಭಾವಶಿಲ್ಪ ಪ್ರಾತ್ಯಕ್ಷಿಕೆಯೊಂದಿಗೆ’ ಸೃಜನಶೀಲ ವರ್ಣಚಿತ್ರ ಕಾರ್ಯಾಗಾರ ಮತ್ತು ವಿನ್ಯಾಸ, ವರ್ಣಸಿದ್ದಾಂತ, ಪರಿಕರ ಬಳಕೆ ಕಾರ್ಯಾಗಾರದ ಸಮಾರೋಪ ಸಮಾರಂಭವನ್ನು ನಾಳೆ (22)ರ ಬೆಳಗ್ಗೆ 10.30ಕ್ಕೆ ಚಾಮರಾಜಪುರಂನಲ್ಲಿರುವ ರವಿವರ್ಮ ಚಿತ್ರಕಲಾ ಶಾಲೆಯಲ್ಲಿ ಏರ್ಪಡಿಸಲಾಗಿದೆ.

ಭಾವಶಿಲ್ಪ ಪ್ರಾತ್ಯಕ್ಷಿಕೆಯನ್ನು ಚಿಕ್ಕಮಗಳೂರು ಶಾಂತಿನಿಕೇತನ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ವಿಶ್ವಕರ್ಮ ಆಚಾರ್ಯ ನಡೆಸಿಕೊಡಲಿದ್ದಾರೆ. ವಕೀಲ ಎಸ್.ಅರುಣ್ ಕುಮಾರ್, ಕಲಾವಿದ ಮಂಜುನಾಥ್ ಹೊನ್ನಾಪುರ, ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯ ಮನು ಚಕ್ರವರ್ತಿ, ರವಿವರ್ಮ ಚಿತ್ರಕಲಾ ಶಾಲೆಯ ಶಿವಕುಮಾರ ಕೆಸರಮಡು ಇರಲಿದ್ದಾರೆ. ಇದೆ ಮೊದಲ ಬಾರಿಗೆ ಸೋಷಿಯಲ್ ಮೀಡಿಯಾ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

 

Leave a Reply

comments

Related Articles

error: