ಮೈಸೂರು

ಛಾಯಾಗ್ರಾಹಕ ನಂದನ್ ಅವರಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ

%e0%b2%a8%e0%b2%ae%e0%b2%a8ಪಶ್ಚಿಮಬಂಗಾಳದ ಕೂಚ್‌ಬೆಹರ್ ಪಟ್ಟಣದಲ್ಲಿ  ಇತ್ತೀಚೆಗೆ ಆಯೋಜಿಸಲಾಗಿದ್ದ ’ಎಕ್ಸ್‌ಪೋಷರ್-2016 ಹೆಸರಿನ ’ಐದನೇ ಅಂತರಾಷ್ಟ್ರೀಯ ಸೆಲೋನ್ ಆಫ್ ಪ್ರಾಜೆಕ್ಟೆಡ್ ಇಮೇಜಸ್’ ಎಂಬ ಅಂತಾರಾಷ್ಟ್ರೀಯ ಛಾಯಾಗ್ರಹಣ ಪ್ರದರ್ಶನ ಹಾಗೂ ಸ್ಪರ್ಧೆಯಲ್ಲಿ ಮೈಸೂರಿನ ಪತ್ರಿಕಾ ಛಾಯಾಗ್ರಾಹಕ ನಂದನ್ ಎ. ನಾರಾಯಣನ್ ಅವರಿಗೆ ಎರಡು ವಿಭಾಗಗಳಲ್ಲಿ ಚಿನ್ನದ ಪದಕ ಲಭಿಸಿದೆ.

ವಿವಿಧ ರಾಷ್ಟ್ರಗಳ ನೂರಾರು ಛಾಯಾಗ್ರಾಹಕರು ಭಾಗವಹಿಸಿದ್ದ ಸ್ಪರ್ಧೆಯಲ್ಲಿ ನಂದನ್ ಅವರ ’ಎಲಿಫೆಂಟ್ ಅಟ್ಯಾಕ್’ ಮತ್ತು ’ ಲೆಪರ್ಡ್ ಇನ್ ಸಿಟಿ’ ಎಂಬ ಎರಡು ಪ್ರತ್ಯೇಕ ಛಾಯಾಚಿತ್ರಗಳಿಗೆ ಎರಡು ಪ್ರತ್ಯೇಕ ಚಿನ್ನದ ಪದಕ ಒಲಿದಿದೆ.

%e0%b2%a8-3ಎಲಿಫೆಂಟ್ ಅಟ್ಯಾಕ್’ ಛಾಯಾಚಿತ್ರಕ್ಕೆ ’ಫೋಟೋಗ್ರಫಿಕ್ ಸೊಸೈಟಿ ಆಫ್ ಅಮೇರಿಕಾ’ ಸಂಸ್ಥೆಯ(ಪಿಎಸ್‌ಎ ಗೋಲ್ಡ್) ಚಿನ್ನದ ಪದಕ ಲಭಿಸಿದ್ದರೆ, ’ಲೆಪರ್ಡ್ ಇನ್ ಸಿಟಿ’ ಛಾಯಾಚಿತ್ರಕ್ಕೆ ’ಫೆಡರೇಷನ್ ಇನ್ ಆರ್ಟ್ ಆಫ್ ಫೋಟೋಗ್ರಫಿ’ ಸಂಸ್ಥೆಯ ಚಿನ್ನದ ಪದಕ  ಲಭಿಸಿದೆ.

ಸ್ಪರ್ಧೆಯಲ್ಲಿ ಇಂಡಿಯಾ, ಕೆನಡಾ, ಹಾಂಗ್‌ಕಾಂಗ್, ಯುಎಸ್‌ಎ, ತೈವಾನ್, ಐರ್ಲೆಡ್, ನೆದರ್‌ಲ್ಯಾಂಡ್, ಫಿನ್‌ಲ್ಯಾಂಡ್, ಕತಾರ್, ರಷ್ಯಾ, ಆಸ್ಟ್ರೇಲಿಯಾ, ಸೌತ್ ಆಫ್ರಿಕಾ, ಯುಕೆ, ಇಟಲಿ, ಫ್ರಾನ್ಸ್, ಡೆನ್ಮಾರ್ಕ್, ಪೋರ್ಚುಗಲ್ ಸೇರಿದಂತೆ  ಹಲವು ದೇಶಗಳ ಖ್ಯಾತ ಛಾಯಾಗ್ರಾಹಕರು ಛಾಯಾಚಿತ್ರ ಸ್ಪರ್ಧೆಯಲ್ಲಿ ಭಾಗವಹಿಸಿದ್ದವರು.

ಅಂತರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾದ ಮೈಸೂರಿನ ಪತ್ರಿಕಾ ಛಾಯಾಗ್ರಾಹಕ ನಂದನ್ ಅವರನ್ನು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಆತ್ಮೀಯವಾಗಿ ಅಭಿನಂದಿಸಲಾಯಿತು.

Leave a Reply

comments

Related Articles

error: