ಪ್ರಮುಖ ಸುದ್ದಿ

ಲೇಡಿ ರೌಡಿಶೀಟರ್ ಯಶಸ್ವಿನಿಗೌಡಗೆ ಶ್ರೀರಾಮಸೇನೆ ಬೆಂಗಳೂರು ಘಟಕದ ಮಹಿಳಾ ಅಧ್ಯಕ್ಷೆ ಪಟ್ಟ

ರಾಜ್ಯ(ಬೆಂಗಳೂರು)ಸೆ.22:- ಲೇಡಿ ರೌಡಿಶೀಟರ್ ಹಾಗೂ ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದ ಯಶಸ್ವಿನಿಗೌಡಗೆ ಶ್ರೀರಾಮಸೇನೆ ಬೆಂಗಳೂರು ಘಟಕದ ಮಹಿಳಾ ಅಧ್ಯಕ್ಷೆ ಪಟ್ಟ ನೀಡಲಾಗಿದೆ.

ಖಾಸಗಿ ಹೋಟೆಲ್ ನಲ್ಲಿ ನಡೆದ ಸಮಾರಂಭದಲ್ಲಿ ಲೇಡಿ ರೌಡಿಶೀಟರ್ ಯಶಸ್ವಿನಿಗೌಡಗೆ ಪಟ್ಟಾಭಿಷೇಕ ನಡೆದಿದೆ. ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಉಪಸ್ಥಿತಿಯಲ್ಲೇ ಯಶಸ್ವಿನಿಗೌಡ ಶ್ರೀರಾಮಸೇನೆ ಬೆಂಗಳೂರು ಘಟಕದ ಅಧ್ಯಕ್ಷೆಯನ್ನಾಗಿ ನೇಮಕ ಮಾಡಲಾಗಿದೆ.

ಯಶಸ್ವಿನಿಗೌಡ ಸುಬ್ರಹ್ಮಣ್ಯಪುರದ ಪೊಲೀಸ್ ಠಾಣಾವ್ಯಾಪ್ತಿಯ ರೌಡಿಶೀಟರ್ ಆಗಿದ್ದು, ಗಂಡನ ಕೊಲೆಪ್ರಕರಣದಲ್ಲಿ ಆರೋಪಿಯಾಗಿದ್ದಳು. ಹಾಗೆಯೇ ಈಕೆ ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದಳು. ಇದೀಗ ಈಕೆಯನ್ನು ಶ್ರೀರಾಮಸೇನೆ ಮಹಿಳಾ ಅಧ್ಯಕ್ಷೆಯನ್ನಾಗಿ ಮಾಡಿರುವುದು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: