ಮೈಸೂರು

ಕಲೆಗೆ ಸಾಮಾಜಿಕ ತಪ್ಪುಗಳನ್ನು ಹುಡುಕಿ ಸರಿಪಡಿಸುವ ಶಕ್ತಿಯಿದೆ: ಯದುವೀರ್

ಕಲೆಯು ಸಾಮಾಜಿಕ ಕಳಕಳಿಯನ್ನು ಜೀವಂತವಾಗಿ ಇಡುವ ಮಾಧ್ಯಮ. ಕಲೆಯಿಂದ ಮಾತ್ರ ಸಮಾಜದಲ್ಲಿನ ತಪ್ಪುಗಳನ್ನು ಹುಡುಕಿ ಸರಿಪಡಿಸಲು ಸಾಧ್ಯ ಎಂದು ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.

ಮೈಸೂರಿನ ಚಾಮರಾಜೇಂದ್ರ ದೃಶ್ಯಕಲಾ ಅಕಾಡೆಮಿಯಲ್ಲಿ ಏರ್ಪಡಿಸಿದ್ದ 9ನೇ ರಾಜ್ಯಮಟ್ಟದ ದೃಶ್ಯಕಲಾ ಕಾಲೇಜಿನ ವಿದ್ಯಾರ್ಥಿಗಳ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಯದುವೀರ್ ಮಾತನಾಡಿದರು.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಿಂದಲೂ ಮೈಸುರು ಸಂಸ್ಥಾನದಲ್ಲಿ ಕಲೆಯನ್ನು ಬೆಳೆಸಲು ಹೆಚ್ಚಿನ ಪ್ರೋತ್ಸಾಹ ದೊರಕಿದೆ. ಅದರಿಂದ ಮೈಸೂರು ಕಲೆಯ ವಿಚಾರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆದಿದೆ. ಮೈಸೂರು ರಾಜವಂಶವು ಕಲೆ, ಸಂಸ್ಕೃತಿಯನ್ನು ಉಳಿಸಿ ಸಾಕಷ್ಟು ಬೆಳೆಸಿದೆ. ಚಾಮರಾಜೇಂದ್ರ ಒಡೆಯರ್ ದೃಶ್ಯಕಲೆಯ ಕುರಿತು ವಿಶೇಷ ಒಲವನ್ನು ಹೊಂದಿದ್ದು, ಅದರ ಫಲವಾಗಿ ಕಾವಾ ಬೆಳೆದಿದೆ. ಅದು ಮತ್ತಷ್ಟು ಎತ್ತರಕ್ಕೆ ಹೆಸರು ಮಾಡುವಂತಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಯದುವೀರ್ ಪತ್ನಿ ತ್ರಿಷಿಕಾದೇವಿ ಒಡೆಯರ್, ಕಾವಾ ಡೀನ್ ಬಸವರಾಜ ಮುಸಾವಳಗಿ, ಪ್ರಾಧ್ಯಾಪಕಿ ಪ್ರೀತಿ ಕಪೂರ್ , ಕಾರ್ಯಾಗಾರದ ಪರಿಣಿತರಾದ ಸೂಗೂರೇಶ್ ಸುಲ್ತಾನಪುರ, ಕೆ.ಜೆ.ಸಚ್ಚಿದಾನಂದ, ಪೂರ್ಣಿಮಾ ಮಕಾರಾಮ್, ವೈಭವ್ ಕಮರೇಶ್, ಬಿ.ಎನ್. ವಿಚಾರ ಉಪಸ್ಥಿತರಿದ್ದರು.

Leave a Reply

comments

Related Articles

error: