ಕ್ರೀಡೆ

ಚೀನಾ ಓಪನ್ ಟೂರ್ನಿಯಿಂದ ನಿರ್ಗಮಿಸಿದ ಶ್ರೀಕಾಂತ್, ಸಿಂಧೂ

ಚಾಂಗ್ಜೌ,ಸೆ.22-ಚೀನಾ ಓಪನ್ಬ್ಯಾಡ್ಮಿಂಟನ್ಟೂರ್ನಿಯಲ್ಲಿ ಭಾರತದ ಹೋರಾಟ ಅಂತ್ಯವಾಗಿದೆ. ಪುರುಷರ ಸಿಂಗಲ್ಸ್ಕ್ವಾರ್ಟರ್ಫೈನಲ್ನಲ್ಲಿ ಕಿಡಂಬಿ ಶ್ರೀಕಾಂತ್ಹಾಗೂ ಮಹಿಳೆಯರ ಸಿಂಗಲ್ಸ್ಕ್ವಾರ್ಟರ್ಫೈನಲ್ನಲ್ಲಿ ಪಿ.ವಿ.ಸಿಂಧೂ ಸೋಲುವುದರೊಂದಿಗೆ ಟೂರ್ನಿಯಿಂದ ನಿರ್ಗಮಿಸಿದ್ದಾರೆ.

ಶ್ರೀಕಾಂತ್ಜಪಾನ್ ಕೆಂಟೊ ಮೊಮೊಟಾ ವಿರುದ್ಧ ಸೋತರೆ, ಸಿಂಧೂ 11-21, 21-11, 15-21ರಿಂದ ಚೀನಾದ ಚೆನ್ಯುಫೈ ವಿರುದ್ಧ ಪರಾಭವಗೊಂಡರು. ಶ್ರೀಕಾಂತ್ಪಂದ್ಯ ಏಕಪಕ್ಷೀಯವಾಗಿ ಮುಕ್ತಾಯಗೊಂಡರೆ, ಹೈದರಾಬಾದ್ಆಟಗಾರ್ತಿ ಸಿಂಧೂ ಸೋಲುವ ಮೊದಲು ಎದುರಾಳಿಗೆ ಕೊಂಚ ಪ್ರತಿರೋಧ ಒಡ್ಡಿದರು.

ಇದಕ್ಕೂ ಮೊದಲು ಹಾಲಿ ವಿಶ್ವ ಚಾಂಪಿಯನ್ಮೊಮೊಟಾ ವಿರುದ್ಧದ 10 ಮುಖಾಮುಖಿಗಳ ಪೈಕಿ ಕೇವಲ 3ರಲ್ಲಿ ಜಯಶಾಲಿಯಾಗಿದ್ದ ಶ್ರೀಕಾಂತ್ಜಪಾನ್ಆಟಗಾರನಿಗೆ ಯಾವುದೇ ವಿಧದಲ್ಲಿ ಸರಿಸಾಟಿಯಾಗಲಿಲ್ಲ. ಕಾನೂನುಬಾಹಿರ ಕ್ಯಾಸಿನೊಗೆ ಭೇಟಿ ನೀಡಿದ ಹಿನ್ನಲೆಯಲ್ಲಿ ಒಂದು ವರ್ಷ ನಿಷೇಧ ಶಿಕ್ಷೆಗೊಳಗಾಗಿದ್ದ ಜಪಾನ್ಆಟಗಾರ ಇತ್ತೀಚಿನ ದಿನಗಳಲ್ಲಿ ಪ್ರಚಂಡ ಫಾರ್ಮ್ನಲ್ಲಿದ್ದು ಸಾಲು ಸಾಲು ಟ್ರೋಫಿಗಳಿಗೆ ಮುತ್ತಿಕ್ಕುತ್ತಿದ್ದಾರೆ.

ಹೈದರಾಬಾದ್ಮೂಲದ ಆಟಗಾರ ಶ್ರೀಕಾಂತ್ ವರ್ಷ ಜೂನ್ಮತ್ತು ಜುಲೈನಲ್ಲಿ ಅನುಕ್ರಮವಾಗಿ ಮಲೇಷ್ಯಾ ಓಪನ್ಮತ್ತು ಇಂಡೊನೇಷ್ಯಾ ಓಪನ್ನಲ್ಲಿ ಮೊಮೊಟಾಗೆ ಸೋತಿದ್ದರು. (ಎಂ.ಎನ್)

Leave a Reply

comments

Related Articles

error: