
ದೇಶ
ನೋಟು ಹಿಂಪಡೆಯುವ ಕಾಲಾವಧಿ ವಿಸ್ತರಣೆ…?
ಬೇಡಿಕೆಯಷ್ಟು ಹೊಸ ಕರೆನ್ಸಿಯನ್ನು ಪೂರೈಸಲು ಆರ್ಬಿಐಗೆ ಕಷ್ಟವಾಗುತ್ತಿದ್ದು, ತುರ್ತಾಗಿ ನೋಟು ಮುದ್ರಿಸಲು ಮುದ್ರಣಾಲಯಗಳು ಹೆಣಹಾಡುತ್ತಿವೆ. ಇದರಿಂದಾಗಿ ಹಳೆಯ ನೋಟು ಹಿಂಪಡೆಯುವ ಕಾಲಾವಧಿಯನ್ನು ಡಿ.30ರ ನಂತರವೂ ಮುಂದುವರಿಸುವ ಸಾಧ್ಯತೆ ಇದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಜನರಿಗೆ ವಾರಕ್ಕೆ 24 ಸಾವಿರ ರೂ. ವಾಪಸ್ ಪಡೆಯುವ ಮಿತಿಯನ್ನು ವಿಧಿಸಿದ್ದರೂ, ಅಷ್ಟು ಪ್ರಮಾಣದ ಹಣವನ್ನು ಒದಗಿಸಲು ಬ್ಯಾಂಕ್ಗಳಿಗೆ ಕಷ್ಟವಾಗಿದೆ. ಎಟಿಎಂಗಳಿಂದ 2,500 ರೂ. ಡ್ರಾ ಮಾಡಿಕೊಳ್ಳಲು ಸರಕಾರ ಅವಕಾಶ ನೀಡಿದೆ. ಎಷ್ಟೋ ಎಟಿಎಂಗಳಲ್ಲಿ ಹಣವಿಲ್ಲ ಎಂಬ ಫಲಕಗಳನ್ನು ಹಾಕಲಾಗಿದೆ. ಹಳೆಯ ನೋಟುಗಳನ್ನು ಹಿಂಪಡೆಯುವ ಮಿತಿಯನ್ನು ವಿಸ್ತರಿಸಬೇಕೆಂದು ಬ್ಯಾಂಕ್ಗಳೇ ಅಭಿಪ್ರಾಯ ವ್ಯಕ್ತಪಡಿಸಿವೆ.