ಸುದ್ದಿ ಸಂಕ್ಷಿಪ್ತ

ಸೆ.24ರಂದು ರಾಸೆಯೋ ಸಂಸ್ಥಾಪನಾ ದಿನಾಚರಣೆ

ಮೈಸೂರು,ಸೆ.22 : ಮೈವಿವಿಯ ಸಂಜೆ ಕಾಲೇಜು ಮತ್ತು ರಾಷ್ಟ್ರಿಯ ಸೇವಾ ಯೋಜನೆ ಹಾಗೂ ಮಹಾರಾಜ ಕಾಲೇಜಿನ ಎನ್.ಎಸ್.ಎಸ್ ಘಟಕ 1,2 ರ ಸಂಯುಕ್ತಾಶ್ರಯದಲ್ಲಿ ರಾಸೆಯೋ ಸಂಸ್ಥಾಪನಾ ದಿನಾಚರಣೆಯನ್ನು ಸೆ.24ರ ಸಂಜೆ 6 ಗಂಟೆಗೆ, ಕಾಲೇಜಿನ ಜೂನಿಯರ್ ಬಿ ಎ ಹಾಲ್ ನಲ್ಲಿ ಏರ್ಪಡಿಸಲಾಗಿದೆ.

ಮಾನಸಗಂಗೋತ್ರಿಯ ಕು.ಕಅ ನಿರ್ದೇಶಕ ಡಾ.ಎನ್.ಎಂ.ತಳವಾರ ಉದ್ಘಾಟಿಸುವರು. ಸಂಜೆ ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಆಂಜನೇಯ ಅಧ್ಯಕ್ಷತೆ. ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ಬಿ.ಚಂದ್ರಶೇಖರ್, ಹಿರಿಯ ವರದಿಗಾರ ಕೆ.ಪಿ.ನಾಗರಾಜ್, ಮಹಾರಾಜ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಸಿ.ಪಿ.ಸುನೀತ, ಆಡಳಿತಾಧಿಕಾರಿ ಪ್ರೊ.ಅನಿಟ ಬ್ರ್ಯಾಗ್ಸ್ ಇರುವರು. (ಕೆ.ಎಂ.ಆರ್)

Leave a Reply

comments

Related Articles

error: