ದೇಶಪ್ರಮುಖ ಸುದ್ದಿ

ಕೆಲಸ ಕಳೆದುಕೊಂಡವರಿಗೆ ಪರಿಹಾರ ನೀಡಲಿದೆ ಕೇಂದ್ರದ ಈ ಹೊಸ ಯೋಜನೆ!

ನವದೆಹಲಿ (ಸೆ.22): ನೌಕರರ ರಾಜ್ಯ ವಿಮಾ ನಿಗಮವು ತನ್ನ 175 ನೇ ಸಭೆಯಲ್ಲಿ, ನೌಕರರ ರಾಜ್ಯ ವಿಮಾ ಕಾಯಿದೆ 1948 ರ ಅಡಿಯಲ್ಲಿ ವಿಮೆ ಮಾಡಿರುವ ವ್ಯಕ್ತಿಗಳಿಗೆ ‘ಅಟಲ್ ಬಿಮಿತ್ ವಕ್ತಿ ಕಲ್ಯಾಣ್ ಯೋಜನೆ’ ಸೌಲಭ್ಯ ಒದಗಿಸಲು ಅನುಮೋದನೆ ನೀಡಿದೆ.

ಈ ಯೋಜನೆಯ ಪ್ರಕಾರ ಕೆಲಸ ಕಳೆದುಕೊಂಡಿರುವವರಿಗೆ, ವಿಮಾದಾರ ನಿರುದ್ಯೋಗಿಗಳಿಗೆ ಸರ್ಕಾರ ಸಿಹಿಸುದ್ದಿ ನೀಡಿದೆ. ಉದ್ಯೋಗವನ್ನು ಕಳೆದುಕೊಳ್ಳುವವರಿಗೆ ಆರ್ಥಿಕ ನೆರವು ಒದಗಿಸಲು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಹೊಸ ಯೋಜನೆಯನ್ನು ಪ್ರಾರಂಭಿಸಿದೆ.

ನೌಕರರ ರಾಜ್ಯ ವಿಮಾ ನಿಗಮವು ತನ್ನ 175ನೇ ಸಭೆಯಲ್ಲಿ, ನೌಕರರ ರಾಜ್ಯ ವಿಮಾ ಕಾಯಿದೆ 1948ರ ಅಡಿಯಲ್ಲಿ ವಿಮೆ ಮಾಡಿರುವ ವ್ಯಕ್ತಿಗಳಿಗೆ ‘ಅಟಲ್ ಬಿಮಿತ್ ವ್ಯಕ್ತಿ ಕಲ್ಯಾಣ್ ಯೋಜನೆ’ ಸೌಲಭ್ಯ ಒದಗಿಸಲು ಅನುಮೋದನೆ ನೀಡಿದೆ.

ಕೆಲಸ ಕಳೆದುಕೊಂಡು ಆರ್ಥಿಕ ಪರಿಸ್ಥಿತಿಯಲ್ಲಿ ನೊಂದವರಿಗೆ, ಹೊಸ ಉದ್ಯೋಗದ ಅವಕಾಶವನ್ನು ಹುಡುಕುತ್ತಿರುವವರಿಗೆ ಈ ಯೋಜನೆಯು ಬ್ಯಾಂಕ್ ಖಾತೆಗೆ ನೇರವಾಗಿ ಪರಿಹಾರವನ್ನು ಒದಗಿಸುತ್ತದೆ. ಅರ್ಹತೆ ಮತ್ತು ಅಪ್ಲಿಕೇಶನ್ ಸ್ವರೂಪ ಸೇರಿದಂತೆ ವಿವರವಾದ ಸೂಚನೆಗಳನ್ನು ಪ್ರತ್ಯೇಕವಾಗಿ ನೀಡಲಾಗುತ್ತದೆ.

ಭಾರತದಲ್ಲಿನ ಉದ್ಯೋಗದ ಪ್ರಸಕ್ತ ಸನ್ನಿವೇಶ ತುಂಬಾ ಕೆಟ್ಟದ್ದಾಗಿದ್ದು, ಅಟಲ್ ಬಿಮಿತ್ ವ್ಯಕ್ತಿ ಕಲ್ಯಾಣ್ ಯೋಜನೆ ನಿರುದ್ಯೋಗದ ಸಂದರ್ಭದಲ್ಲಿ, ವಿಮಾದಾರರ ಬ್ಯಾಂಕಿನ ಖಾತೆಗೆ ನೇರವಾಗಿ ನಗದು ಪಾವತಿಸುವ ಪರಿಹಾರವಾಗಿದೆ. ನೌಕರರ ರಾಜ್ಯ ವಿಮಾ ಕಾಯಿದೆ, 1948ರ ಅಡಿಯಲ್ಲಿ ವಿಮೆ ಮಾಡಿರುವ ವ್ಯಕ್ತಿಗಳಿಗೆ ಈ ಸೌಲಭ್ಯ ಸಿಗಲಿದೆ.

ಪರಿಷ್ಕೃತ ಅರ್ಹತೆಗೆ ಅನುಗುಣವಾಗಿ ವಿಮೆದಾರರಿಗೆ ಮತ್ತು ಅವರ ಫಲಾನುಭವಿಗಳಿಗೆ ಉಚಿತ ವಿಶೇಷ ಚಿಕಿತ್ಸಾ ಸೌಲಭ್ಯವನ್ನು ಪಡೆಯಲು ಈ ವಿಶ್ರಾಂತಿ ವಿಪರೀತವಾಗಿ ಸಹಾಯ ಮಾಡುತ್ತದೆ ಎಂದು ಸಚಿವಾಲಯ ತಿಳಿಸಿದೆ. ಮರಣದ ನಂತರ ವಿಮಾದಾರನ ಅಂತ್ಯಕ್ರಿಯೆಯ ಖರ್ಚುಗಳನ್ನು ಈಗಿರುವ ರೂ.10,000ದಿಂದ ರೂ.15,000ಕ್ಕೆ ಹೆಚ್ಚಿಸಲು ನಿಗಮ ಒಪ್ಪಿಕೊಂಡಿದೆ ಎಂದು ತಿಳಿದುಬಂದಿದೆ.

ಸೂಪರ್ ಸ್ಪೆಷಾಲಿಟಿ ಚಿಕಿತ್ಸೆಯನ್ನು ಪಡೆದುಕೊಳ್ಳುವ ಅರ್ಹತೆಯನ್ನು ಸಡಿಲಗೊಳಿಸಲಾಗಿದ್ದು, ಹಿಂದಿನ 2 ವರ್ಷ 06 ತಿಂಗಳುಗಳಿಂದ 78 ದಿನಗಳಿಗೆ ಸಡಿಲಿಸಲಾಗಿದೆ. ಅಂದರೆ ಸೇವೆ ಸಲ್ಲಿಸಿದ ವಿಮಾ ಉದ್ಯೋಗಿಗಳ ಸೂಪರ್ ಸ್ಪೆಷಾಲಿಟಿ ಚಿಕಿತ್ಸೆಯನ್ನು ಪಡೆದುಕೊಳ್ಳುವ ಅರ್ಹತೆಯನ್ನು 78 ದಿನಗಳಿಗೆ ಇಳಿಸಲಾಗಿದೆ. ವಿಮಾದಾರರಿಗೆ ಸೂಪರ್ ಸ್ಪೆಷಾಲಿಟಿ ಚಿಕಿತ್ಸೆಯನ್ನು ಪಡೆಯುವ ಅರ್ಹತೆಯನ್ನು 156 ದಿನ, ಒಂದು ವರ್ಷ ಕೆಲಸದಿಂದ ವಿಶ್ರಾಂತಿ ಪಡೆಯಲು ಸಡಿಲಿಕೆ ನೀಡಲಾಗಿದೆ. (ಎನ್.ಬಿ)

Leave a Reply

comments

Related Articles

error: