ದೇಶಪ್ರಮುಖ ಸುದ್ದಿ

ಪೆಟ್ರೋಲ್ ಬಂಕ್‍ನಲ್ಲಿ ಇನ್ನು ಡಿಜಿಟಲ್ ಪೇಮೆಂಟ್‍ಗೆ ಕ್ಯಾಶ್‌ಬ್ಯಾಕ್ ಇಲ್ಲ!

ಮುಂಬೈ (ಸೆ.22): ನೋಟು ಅಪನಗದೀಕರಣ ವೇಳೆ ನಗದು ಬಿಕ್ಕಟ್ಟು ಹಾಗೂ ಡಿಜಿಟಲ್ ಪಾವತಿ ವ್ಯವಸ್ಥೆಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಪೆಟ್ರೋಲ್ ಬಂಕ್‍ನಲ್ಲಿ ಕ್ಯಾಶ್‌ಬ್ಯಾಕ್ ವ್ಯವಸ್ಥೆಯನ್ನು ಆರಂಭಿಸಲಾಗಿತ್ತು. ಆದರೆ ಈಗ  ಈ ರಿಯಾಯಿತಿಯನ್ನು ನಿಲ್ಲಿಸಲು ತೈಲ ಕಂಪನಿಗಳು ಮುಂದಾಗಿವೆ.

ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ನಲ್ಲಿ ಪೆಟ್ರೋಲ್ ಹಾಕಿಸಿಕೊಂಡವರಿಗೆ ಕ್ಯಾಶ್ ಬ್ಯಾಕ್ ಅಥವಾ ರಿಯಾಯಿತಿ ಕೊಡುಗೆಯನ್ನು ನೀಡಿತ್ತು ಅದನ್ನು ಹಿಂಪಡೆಯಲು ಮುಂದಾಗಿದ್ದಾರೆ. ಇನ್ನು ಮೂರು ತಿಂಗಳು ಕಳೆದ ನಂತರ ಅಂದರೆ 2019 ಆರಂಭದಿಂದ ಪೆಟ್ರೋಲ್ ಬಂಕ್ ಗಳಲ್ಲಿ ಆನ್‌ಲೈನ್ ಅಥವಾ ಕಾರ್ಡ್ ಪಾವತಿಗೆ ನೀಡಲಾಗುತ್ತಿರುವ ಕ್ಯಾಶ್ ಬ್ಯಾಕ್ ಹಿಂಪಡೆಯಲಾಗುತ್ತದೆ.

2016ರಲ್ಲಿ 500 ರೂ ಹಾಗೂ 1 ಸಾವಿರ ರೂ ನೋಟುಗಳ ನಿಷೇಧ ಮಾಡಿದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ನಗದು ರಹಿತ ವ್ಯವಹಾರ ಮತ್ತು ಪ್ಲಾಸ್ಟಿಕ್ ಕರೆನ್ಸಿ ಅಂದರೆ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಗಳ ಪ್ರೋತ್ಸಾಹಕ್ಕಾಗಿ ಹಲವು ಕೊಡುಗೆಗಳನ್ನು ಘೋಷಣೆ ಮಾಡಿತ್ತು. ಪೆಟ್ರೋಲ್ ಬಂಕ್ ಗಳಲ್ಲಿ ಕಾರ್ಡ್ ಅಥವಾ ಆನ್‌ಲೈನ್ ಮೂಲಕ ಹಣ ಪಾವತಿಸಿದರೆ ಗ್ರಾಹಕರಿಗೆ 75 ಪೈಸೆಯಷ್ಟು ಕ್ಯಾಶ್ ಬ್ಯಾಕ್ ನೀಡಲಾಗುತ್ತಿತ್ತು. ಬಳಿಕ ಕೆಲವೇ ತಿಂಗಳುಗಳಲ್ಲಿ ಅದನ್ನು 25 ಪೈಸೆಗೆ ಇಳಿಸಲಾಗಿತ್ತು. ಇದೀಗ ಈ ರಿಯಾಯಿತಿಯನ್ನು ಸಂಪೂರ್ಣ ರದ್ದುಪಡಿಸಲು ನಿರ್ಧರಿಸಲಾಗಿದೆ. (ಎನ್.ಬಿ)

Leave a Reply

comments

Related Articles

error: