ಪ್ರಮುಖ ಸುದ್ದಿ

ಭಾಗಮಂಡಲದಲ್ಲಿ ರೈತರ ಸಭೆ : ರಸಗೊಬ್ಬರ ಬಳಕೆಗೂ ಮೊದಲು ಮಣ್ಣಿನ ಪರೀಕ್ಷೆ ಅಗತ್ಯ : ಮೃತ್ಯುಂಜಯ ಸಲಹೆ

ರಾಜ್ಯ(ಮಡಿಕೇರಿ )ಸೆ.23 :- ಸಮರ್ಪಕ ಗೊಬ್ಬರದ ಬಳಕೆ ನಡೆಯದಿರುವುದರಿಂದ ಮಣ್ಣಿನ ಫಲವತ್ತತೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಯಾವುದೇ ಪ್ರದೇಶದಲ್ಲಿನ ಕೃಷಿಗೆ ರಸಗೊಬ್ಬರವನ್ನು ಬಳಸುವುದಕ್ಕೂ ಮುನ್ನ ಮಣ್ಣಿನ ಪರೀಕ್ಷೆ ನಡೆಸುವುದು ಅತ್ಯವಶ್ಯಕವೆಂದು ಎಂಸಿಫ್ ಕೊಡಗು ಜಿಲ್ಲಾ ವ್ಯವಸ್ಥಾಪಕರಾದ ಮೃತ್ಯುಂಜಯ ತಿಳಿಸಿದ್ದಾರೆ.

ಭಾಗಮಂಡಲ ವಿಎಸ್‍ಎಸ್‍ಎನ್ ಸಭಾಂಗಣದಲ್ಲಿ ಶನಿವಾರ  ಆಯೋಜಿತವಾಗಿದ್ದ ‘ರೈತರ ಸಭೆ’ಯಲ್ಲಿ  ಬೆಳೆಯ ಗುಣಮಟ್ಟ ಹಾಗೂ ಇಳುವರಿ ವೃದ್ಧಿಸಲು ಮಂಗಳ ಸಸ್ಯ ಪೆÇೀಷಕಾಂಶ ಉತ್ಪನ್ನಗಳು ಈ ವಿಷಯದ ಬಗ್ಗೆ ತಮ್ಮ ತಂಡದೊಂದಿಗೆ ಮಾಹಿತಿ ನೀಡಿ ಮೃತ್ಯುಂಜಯ ಅವರು ಮಾತನಾಡಿದರು.

ಸಾಂಪ್ರದಾಯಿಕ ಕೃಷಿ ಪದ್ಧತಿಗಳು        ಮರೆಯಾಗುತ್ತಿರುವಂತೆಯೇ, ಮಣ್ಣಿನ ಸತ್ತ್ವವು ಕುಸಿಯುತ್ತಿದೆ. ಹೀಗಿದ್ದು ಈ ಬಗ್ಗೆ ರೈತ ಸಮುದಾಯ ಗಂಭೀರವಾಗಿಲ್ಲವೆಂದು ಅಭಿಪ್ರಾಯಿಸಿದ ಅವರು, ಯಾವ ಹಂತದಲ್ಲಿ ಕೃಷಿಗೆ ರಸಗೊಬ್ಬರವನ್ನು ನೀಡಬೇಕು ಮತ್ತು ಮಣ್ಣಿನಲ್ಲಿ ಯಾವ ಪೋಷಕಾಂಶ ಕಡಿಮೆಯಾಗಿದೆ ಎನ್ನುವುದನ್ನು ಅರಿತುಕೊಳ್ಳುವ ಸಲುವಾಗಿ ರೈತರು ಮಣ್ಣಿನ ಪರೀಕ್ಷೆ ನಡೆಸುವುದು ಅತ್ಯವಶ್ಯವೆಂದು ಸ್ಪಷ್ಟಪಡಿಸಿದರು.

ಕೃಷಿಕರು ತಮ್ಮ ತೋಟದ ಜಾಗದ ಮಣ್ಣನ್ನು ತೆಗೆದು ಪರೀಕ್ಷೆಗೆ ನೀಡಬೇಕು ಮತ್ತು ಈ ಸಂದರ್ಭ ಪರೀಕ್ಷೆಗೆ ಕೊಡುವ  ಮಣ್ಣಿನಲ್ಲಿ ಯಾವುದೇ ರೀತಿಯ ಗೊಬ್ಬರ ಸೇರ್ಪಡೆಗೊಳ್ಳದಂತೆ ಎಚ್ಚರಿಕೆ ವಹಿಸುವುದು ಅತ್ಯವಶ್ಯ. ಮಣ್ಣನ್ನು ಪರೀಕ್ಷೆಗೆ ನೀಡಿದ 20 ದಿನದಲ್ಲಿ ರೈತರಿಗೆ ಸಂಸ್ಥೆಯಿಂದ ಹೆಲ್ತ್ ಕಾರ್ಡ್ ನೀಡಲಾಗುವುದೆಂದು ಮಾಹಿತಿ ನೀಡಿದರು.

ಜಿಲ್ಲೆಯ ಬೆಳೆಗಾರರು ತಮ್ಮ ತೋಟದ ಕರಿಮೆಣಸು, ಕಾಫಿ ಕೃಷಿ ಸೇರಿದಂತೆ ಭತ್ತದ ಕೃಷಿ ಚಟುವಟಿಕೆಗೆ ಅನುಗುಣವಾಗಿ ಮಣ್ಣಿನ ಪರೀಕ್ಷೆ ನಡೆಸುವ ಮೂಲಕ, ಆ ಪ್ರದೇಶಕ್ಕೆ ಅಗತ್ಯವಾಗಿ ನೀಡಬೇಕಾದ ಪೋಷಕಾಂಶದ ಮಾಹಿತಿಯನ್ನು ಅರಿತು, ಸಮರ್ಪಕ ರೀತಿಯಲ್ಲಿ ಗೊಬ್ಬರವನ್ನು ಕೃಷಿಗೆ ಒದಗಿಸಲು ಮುಂದಾಗಬೇಕು. ಇದರಿಂದ ಉತ್ತಮ ಫಸಲನ್ನು ಪಡೆಯಲು  ಸಾಧ್ಯವೆಂದು ತಿಳಿಸಿದರು.

ವಿಎಸ್‍ಎಸ್‍ಎನ್ ಅಧ್ಯಕ್ಷ ಹೊಸೂರು ಸತೀಶ್ ಜೋಯಪ್ಪ ಅವರು ಮಾತನಾಡಿ, ಎಂಸಿಎಫ್ ಅಧಿಕಾರಿಗಳು ರೈತರಿಗೆ ಉಪಯುಕ್ತ ಮಾಹಿತಿಯನ್ನು ನೀಡಿದ್ದು, ಮುಂಬರುವ ದಿನಗಳಲ್ಲಿ  ಕಾರ್ಯಾಗಾರವನ್ನು ನಡೆಸುವ ಬಗ್ಗೆ ಇಂಗಿತ ವ್ಯಕ್ತಪಡಿಸಿದರು.

ಸಭೆÉಯಲ್ಲಿ  ವಿಎಸ್‍ಎಸ್‍ಎನ್‍ನ ನಿರ್ದೇಶಕ, ಸಿಬ್ಬಂದಿ ವರ್ಗ, ರೈತರು ಉಪಸ್ಥಿತರಿದ್ದರು.    (ಕೆಸಿಐ,ಎಸ್.ಎಚ್)

Leave a Reply

comments

Related Articles

error: