ಮೈಸೂರು

ವಿಜಯಾ ಸಿಂಧುವಳ್ಳಿ, ಬಿ. ಗಣಪತಿ ಅವರಿಗೆ ರಂಪಉ ಪ್ರಶಸ್ತಿ

ರಂಗ ಪಣತ ಉಬ್ಬೂರು ಕೊಡಮಾಡುವ ಉಬ್ಬೂರು ಪಟೇಲ್ ಯು.ಟಿ. ಶಾಮಯ್ಯಗೌಡ ರಂಗ ಪ್ರಶಸ್ತಿಯನ್ನು ಹಿರಿಯ ರಂಗ ಸಂಘಟಕರಾದ ವಿಜಯಾ ಸಿಂಧುವಳ್ಳಿ ಮತ್ತು ಉಬ್ಬೂರು ಕಮಲಮ್ಮ ಶಾಮಯ್ಯಗೌಡ ಜಾನಪದ ಪ್ರಶಸ್ತಿಯನ್ನು ಯಕ್ಷಗಾನ ಕಲಾವಿದ ಬಿ.ಗಣಪತಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ನಗರದ ಕಲಾಮಂದಿರದಲ್ಲಿ ರಂಪಉ ವತಿಯಿಂದ ಆಯೋಜಿಸಿದ್ದ ಸಂಸ್ಥೆಯ ದಶಮಾನೋತ್ಸವ ಸಮಾರಂಭದಲ್ಲಿ ವನ್ಯಜೀವಿ ತಜ್ಞರಾದ ಕೃಪಾಕರ – ಸೇನಾನಿ ಮತ್ತು ನಟ ರಂಗಾಯಣ ರಘು ಪ್ರಶಸ್ತಿ ಪ್ರದಾನ ಮಾಡಿದರು.

ಚಿತ್ರನಟ ರಂಗಾಯಣ ರಘು ಮಾತನಾಡಿ, ಇಂದು ಸಮಾಜದಲ್ಲಿ ಮಕ್ಕಳು ಪೋಷಕರನ್ನು ಮರೆಯುತ್ತಿದ್ದಾರೆ. ಹೈಟೆಕ್ ವೃದ್ಧಾಶ್ರಮ ಮತ್ತು ಅನಾಥಾಶ್ರಮಗಳು ಹೆಚ್ಚಾಗುತ್ತಿವೆ. ಇಂತಹ ಸಮಯದಲ್ಲಿ ಪೋಷಕರ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬಿ.ಗಣಪತಿ, ಯಕ್ಷಗಾನ ಬಯಲಾಟ ಕಲೆಗಳು ಅಳಿಯುತ್ತಿದ್ದು, ಅವುಗಳನ್ನು ಉಳಿಸಬೇಕಿದೆ. ತಮ್ಮ ಮಕ್ಕಳಿಗೆ ಆ ಕಲೆಗಳನ್ನು ಪರಿಚಯಿಸುವುದಕ್ಕಾದರೂ ಉಳಿಸಬೇಕು. ಆ ಮೂಲಕ ಸಾಂಸ್ಕೃತಿಕ ಅಭಿರುಚಿಯನ್ನು ಬೆಳೆಸಬೇಕು ಎಂದರು.

ರಂಪಉ ಅಧ್ಯಕ್ಷ ಯು.ಎಸ್. ರಾಮಣ್ಣ, ಕಾರ್ಯದರ್ಶಿ ಡಿ.ತಿಪ್ಪಣ್ಣ ಉಪಸ್ಥಿತರಿದ್ದರು.

Leave a Reply

comments

Related Articles

error: