ಪ್ರಮುಖ ಸುದ್ದಿ

‘ಆಯಷ್ಮಾನ್ ಭಾರತ್’ ಯೋಜನೆಗೆ ಚಾಲನೆ : ಬಡವರ ಸೇವೆ ಮಾಡಲು ಇದಕ್ಕಿಂತ ದೊಡ್ಡ ಕಾರ್ಯಕ್ರಮ ಬೇರೆ ಯಾವುದೂ ಇಲ್ಲ ; ಪ್ರಧಾನಿ ಮೋದಿ

ದೇಶ(ಜಾರ್ಖಂಡ್)ಸೆ.23:- ಆಯುಷ್ಮಾನ್ ಭಾರತ ಯೋಜನೆ ಯಾವುದೇ ಒಂದು ಜಾತಿ,ವರ್ಗಕ್ಕೆ ಸೀಮಿತವಾದ ಯೋಜನೆಯಲ್ಲ. ಜಾತಿ, ಸಂಪ್ರದಾಯ,ಆಸ್ತಿಕ, ನಾಸ್ತಿಕ ಹೀಗೆ ಯಾವ ಭೇದ ಭಾವವೂ ಇಲ್ಲದೆ ಎಲ್ಲರಿಗೂ ಆಯುಷ್ಮಾನ್ ಭಾರತದ ಲಾಭ ಸಿಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಜಾರ್ಖಂಡ್ ನ ರಾಜಧಾನಿ ರಾಂಚಿಯಲ್ಲಿ ‘ಆಯಷ್ಮಾನ್ ಭಾರತ್’ ಯೋಜನೆಗೆ ಚಾಲನೆ ನೀಡಿದ ಅವರು  ಎಲ್ಲರೂ ಸುಖವಾಗಿರಬೇಕು, ಎಲ್ಲರೂ ನೆಮ್ಮದಿಯಾಗಿರಬೇಕು ಎಂಬುದು ನಮ್ಮ ಋಷಿಮುನಿಯರ ಕನಸು. ನನಸಾಗಿಸುವುದು ನಮ್ಮ ಜವಾಬ್ದಾರಿ. ಇಂದು ಬಿರ್ಸಾ ಮುಂಡಾರ ಭೂಮಿಯ ಮೇಲೆ ಕನಸನ್ನು ನನಸು ಮಾಡುವ ಒಂದು ದೊಡ್ಡ ಹೆಜ್ಜೆಯನ್ನು ಇಟ್ಟಿದ್ದೇವೆ. ಬಡವರ ಸೇವೆ ಮಾಡಲು ಇದಕ್ಕಿಂತ ದೊಡ್ಡ ಕಾರ್ಯಕ್ರಮ ಬೇರೆ ಯಾವುದೂ ಇಲ್ಲ ಎಂದರು.  ದೇಶದ 50ಕೋಟಿಗೂ ಅಧಿಕ ಅಣ್ಣ-ತಂಗಿಯರಿಗೆ ರೂ.5ಲಕ್ಷದವರೆಗೆ ಆರೋಗ್ಯ ಖಾತ್ರಿ ಕೊಡುವ ವಿಶ್ವದ ಅತಿದೊಡ್ಡ ಯೋಜನೆಯಾಗಿದ್ದು, ಪೂರ್ಣ ವಿಶ್ವದಲ್ಲಿ ಸರ್ಕಾರದ ಹಣದಲ್ಲಿ ಇಷ್ಟು ದೊಡ್ಡ ಯೋಜನೆ ಯಾವುದೇ ದೇಶದಲ್ಲಿ ಜಾರಿಯಾಗಿಲ್ಲ. ಯೋಜನೆಯ ಒಟ್ಟು ಫಲಾನುಭವಿಗಳ ಸಂಖ್ಯೆ ಪೂರ್ಣ ಐರೋಪ್ಯ ಒಕ್ಕೂಟದಷ್ಟು ದೊಡ್ಡದು ಎಂದು ತಿಳಿಸಿದರು.

ಬಡವರ ಬಡತನ ನೀಗಿಸಲು ಹೋರಾಡಿದ ಮಹಾಪುರುಷರನ್ನು ನೆನಪಿಸಿಕೊಂಡು ಈ ಯೋಜನೆ ಸಮರ್ಪಣೆ ಮಾಡುತ್ತಿದ್ದೇನೆ. ಎಲ್ಲರಿಗೂ ಉತ್ತಮ ಚಿಕಿತ್ಸೆ ಸಿಗಲಿ ಎಂಬ ಆಶಯದೊಂದಿಗೆ ಈ ಯೋಜನೆಯನ್ನು ದೇಶಕ್ಕೆ ಸಮರ್ಪಿಸುತ್ತಿದ್ದೇನೆ ಎಂದು ಹೇಳಿದರು. (ಎಸ್.ಎಚ್)

Leave a Reply

comments

Related Articles

error: