ದೇಶ

ಭಾರೀ ಮಳೆ: ಪ್ರವಾಹದಲ್ಲಿ ಕೊಚ್ಚಿ ಹೋದ ಪ್ರವಾಸಿ ಬಸ್

ನವದೆಹಲಿ,ಸೆ.24-ಪ್ರವಾಸಿಗರ ಬಸ್ ವೊಂದು ಖ್ಯಾತ ಪ್ರವಾಸಿ ತಾಣವಾದ ಮನಾಲಿಯಲ್ಲಿ ಬಿಯಾಸ್ ನದಿ ಪ್ರವಾಹದಲ್ಲಿ ಕೊಚ್ಚಿ ಹೋದ ಘಟನೆ ಹಿಮಾಚಲ ಪ್ರದೇಶದ ಕುಲು ಜಿಲ್ಲೆಯಲ್ಲಿ ನಡೆದಿದೆ.

ಅದೃಷ್ಟವಶಾತ್ ಬಸ್ ಕೊಚ್ಚಿ ಹೋದಾಗ ಬಸ್ ನಲ್ಲಿ ಪ್ರಯಾಣಿಕರು ಇರಲಿಲ್ಲ. ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ 127.4 ಮಿಲಿ ಮೀಟರ್ ಮಳೆಯಾಗಿದ್ದು, ನದಿಗಳು ತುಂಬಿ ಹರಿಯುತ್ತಿವೆ. ನೈರುತ್ಯ ಮುಂಗಾರು ರಾಜ್ಯದಲ್ಲಿ ಭಾರಿ ಮಳೆಗೆ ಕಾರಣವಾಗಿದ್ದು, ಅಲ್ಲಲ್ಲಿ ಭೂಕುಸಿತಗಳು ಸಂಭವಿಸಿದೆ. ಹೆದ್ದಾರಿಗಳಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ.

ಬಿಯಾಸ್ ನದಿಯ ನೀರಿನ ಮಟ್ಟ ಅಪಾಯದ ಮಟ್ಟವನ್ನು ತಲುಪಿದ್ದು, ಮಂಡಿ ಜಿಲ್ಲೆ ಹನೋಗಿ ದೇವಾಲಯ ಬಳಿ ಚಂಡೀಗಢಮನಾಲಿ ರಾಷ್ಟ್ರೀಯ ಹೆದ್ದಾರಿಯ ಸಮಕ್ಕೆ ಹರಿಯುತ್ತಿದೆ. ಮಂಡಿ ಜಿಲ್ಲೆಯ ಆಟ್ ಎಂಬಲ್ಲಿ ಬಿಯಾಸ್ ನದಿ ನೀರು ಹೆದ್ದಾರಿಯಲ್ಲಿ ಹರಿಯುತ್ತಿರುವುದರಿಂದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 3ರಲ್ಲಿ ಸಂಚಾರ ಸ್ಥಗಿತಗೊಂಡಿದೆ. (ಎಂ.ಎನ್)

Leave a Reply

comments

Related Articles

error: