ಮೈಸೂರು

ಮದ್ಯ ಸೇವಿಸಿ ಬಂದು ಪೀಡಿಸುತ್ತಿದ್ದ ಪತಿ ಮತ್ತು ಆತನ ಕುಟುಂಬಿಕರ ವಿರುದ್ಧ ಪತ್ನಿ ದೂರು

ಮೈಸೂರು, ಸೆ.24:- ಮದ್ಯ ಸೇವಿಸಿ ಬಂದು ಪೀಡಿಸುತ್ತಿದ್ದ ಪತಿ ಮತ್ತು ಆತನಿಗೆ ಸಹಕರಿಸುತ್ತಿದ್ದ ಆತನ ಕುಟುಂಬಿಕರ ವಿರುದ್ಧ ಮಹಿಳೆಯೋರ್ವರು ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ.

ಶಕುಂತಲ ಕೆ ಎಂಬವರೇ ದೂರು ನಿಡಿದವರಾಗಿದ್ದು, ಅವರ ಪತಿ ಸತೀಶ್ಮಾಧವನ್ ಎಂಬವರೊಂದಿಗೆ 06.11.2016  ರಂದು ಸಂಪ್ರದಾಯದಂತೆ ಮದುವೆಯಾಗಿತ್ತು. ಮದುವೆಯ ಸಮಯದಲ್ಲಿ ಸತೀಶ್ ಮಾಧವನ್ ಮತ್ತು ಮನೆಯವರ ಬೇಡಿಕೆಯಂತೆ300 ಗ್ರಾಂ  ಚಿನ್ನ, 10 ಲಕ್ಷ ನಗದು ಹಣವನ್ನು ನೀಡಿ, ಮದುವೆ ಮಾಡಿಕೊಡಲಾಗಿತ್ತು. ಮದುವೆಯ ನಂತರ ಪತಿ ಮತ್ತು  ಆತನ ತಾಯಿ ಕೇರಳ ರಾಜ್ಯದ ಕಲ್ಪೆಟ್ಟ ತಾಲೂಕು, ವೈನಾಡ್ ಜಿಲ್ಲೆಯಲ್ಲಿ ವಾಸವಾಗಿದ್ದರು. ಆ ಸಮಯದಲ್ಲಿ ಸಣ್ಣ ಪುಟ್ಟ ವಿಚಾರಗಳಿಗೆ ವಿನಾಕಾರಣ ಬೈಯ್ಯವುದು, ಸರಿಯಾಗಿ ಊಟ ನೀಡದೇ ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡುತ್ತಿದ್ದರು. ಸಾಕಮ್ಮ ಮತ್ತು ಜಯಮ್ಮ ಇಲ್ಲ ಸಲ್ಲದ ಚಾಡಿ ಹೇಳಿ ಕೊಟ್ಟು, ಬೈಯುವಂತೆ ಮಾಡುತ್ತಿದ್ದರು. ಅವರು ಹೇಳಿದಂತೆ ಕೇಳದಿದ್ದರೆ  ಸಾಯಿಸುವುದಾಗಿ ಕೊಲೆ ಬೆದರಿಕೆಯನ್ನು ಹಾಕಿದ್ದರು. ನನ್ನ ಪತಿ ಪ್ರತಿ ದಿನ ಕುಡಿದು ಬಂದು ಬೈದು ಹೊಡೆದು  ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದರು.  ನಾನು  ಗರ್ಭಿಣಿಯಾಗಿದ್ದೆ.  ಆಗ ಸರಿಯಾಗಿ ಊಟ ಕೊಡದೇ, ಜಗಳ ಮಾಡಿ, ಬೈದು, ಹೊಡೆದು ಹಿಂಸೆ ನೀಡಿ, ತಾಯಿ ಮನೆಗೆ ತಂದು ಬಿಟ್ಟಿದ್ದಾರೆ.  ಬಳಿಕ ಅಬಾರ್ಷನ್ ಆಗಿದೆ. ನೋಡಲು ಬಂದಿಲ್ಲವೆಂದು ತಂದೆತಾಯಿಯವರೊಡನೆ ಕೇರಳಕ್ಕೆ ಮನೆಗೆ ಹೋದಾಗ  ಮನೆಗೆ ಸೇರಿಸದೇ ಅವಾಚ್ಯ ಶಬ್ದಗಳಿಂದ ಬೈದು, ಹೊಡೆದು, ಜಗಳವಾಡಿ ರಾತ್ರಿಯಿಡಿ ಮನೆಯಿಂದ ಹೊರಗೆ ಇರಿಸಿದ್ದು, ಬಟ್ಟೆಗಳನ್ನು ಹೊರಗೆ ಎಸೆದು, ಮನೆ ಬಿಟ್ಟು  ಹೋಗುವಂತೆ ಜಗಳ ಮಾಡಿದ್ದಾರೆ. ತಂದೆ ತಾಯಿಯವರೊಡನೆ ಮೈಸೂರಿಗೆ ವಾಪಸ್ಸು ಬಂದಿದ್ದು, ಇವರ  ವಿರುದ್ಧ ಕ್ರಮ ಜರುಗಿಸುವಂತೆ ದೂರಿನಲ್ಲಿ ತಿಳಿಸಿದ್ದಾರೆ.

ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: