ದೇಶ

ಪಶ್ಚಿಮ ಬಂಗಾಳದಲ್ಲಿ ಕುಸಿದು ಬಿದ್ದ ಸೇತುವೆ

ನವದೆಹಲಿ,ಸೆ.24-ಪಶ್ಚಿಮ ಬಂಗಾಳದ ಕಕ್ದಿಪ್ ಎಂಬಲ್ಲಿ ಸೇತುವೆಯೊಂದು ಸೋಮವಾರ ಕುಸಿದು ಬಿದ್ದಿದೆ. ರಾಜ್ಯದಲ್ಲಿ ಒಂದು ತಿಂಗಳ ಅವಧಿಯಲ್ಲಿ ನಡೆಯುತ್ತಿರುವ ಮೂರನೇ ಘಟನೆ ಇದಾಗಿದೆ.

ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ. ಅಧಿಕಾರಿಗಳು, ಪೊಲೀಸರು ಈಗಾಗಲೇ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಸೆ.4ರಂದು ಕೋಲ್ಕತ್ತಾದ ಮಜೇರ್ ಹಾಟ್ ನಲ್ಲಿ ಸೇತುವೆ ಕುಸಿದು ಬಿದ್ದು 24 ಮಂದಿ ಗಾಯಗೊಂಡು ಮೂವರು ಮೃತಪಟ್ಟಿದ್ದರು. ಸೆ.7ರಂದು ಸಿಲಿಗುರಿಯಲ್ಲಿ ಸೇತುವೆಯೊಂದು ಕುಸಿದುಬಿದ್ದಿತ್ತು. (ಎಂ.ಎನ್)

Leave a Reply

comments

Related Articles

error: