ಮೈಸೂರು

ವಿಶ‍್ವ ಫಾರ್ಮಸಿ ದಿನಾಚರಣೆ ನಾಳೆ : ಜಾಗೃತಿ

ಜೆಎಸ್ಎಸ್, ಫಾರೂಕಿಯಾ ಹಾಗೂ ಶಾರದಾ ಫಾರ್ಮಸಿ ಕಾಲೇಜುಗಳ ಸಹಯೋಗ

ಮೈಸೂರು,ಸೆ.24 : ಇಂಡಿಯನ್ ಫಾರ್ಮಸ್ಟಿಕಲ್ ಅಸೋಸಿಯೇಷನ್ ನ ಮೈಸೂರು ವಿಭಾಗ, ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡಮಿ, ಶಾರದಾ ಹಾಗೂ ಫಾರೂಕಿಯ ಪಾರ್ಮಸ್ಟಿಕಲ್ ಕಾಲೇಜುಗಳ ಸಹಯೋಗದಲ್ಲಿ ಸೆ.25ರಂದು ‘ವಿಶ್ವ ಫಾರ್ಮಸಿಗಳ ದಿನಾಚರಣೆ’ಯನ್ನು ಏರ್ಪಡಿಸಲಾಗಿದೆ.

ಅಂದು ಬೆಳಗ್ಗೆ 11 ಗಂಟೆಯಿಂದ ಜೆಎಸ್ಎಸ್ ಫಾರ್ಮಸಿ ಕಾಲೇಜಿನ ರಾಜೇಂದ್ರ ಸಭಾಂಗಣದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಜೆಎಸ್ಎಸ್ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ಸುರೇಶ್, ಫಾರೂಕಿಯ ಕಾಲೇಜು ಆಫ್ ಫಾರ್ಮಸಿಯ ಪ್ರಾಂಶುಪಾಲರಾದ ಡಾ.ಮಹ್ಮದ್ ಸಲಾಲುದ್ದೀನ್, ಶಾರದಾ ವಿಲಾಸ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲರಾದ ಹಾಜರಿರಲಿದ್ದಾರೆ ಎಂದು ಜೆಎಸ್ಎಸ್ ಆಸ್ಪತ್ರೆ ನಿರ್ದೇಶಕ ಹಾಗೂ ಇಂಡಿಯನ್ ಫಾರ್ಮಸಿಸ್ಟ್ ಅಸೋಸಿಯೇಷನ್ ನ ಮೈಸೂರು ವಿಭಾಗದ ಅಧ್ಯಕ್ಷ ಡಾ.ಟಿ.ಎಂಪ್ರಮೋದ್ ಕುಮಾರ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ತೆರೆ ಹಿಂದೆ ಕರ್ತವ್ಯ ನಿರ್ವಹಿಸುವ ಫಾರ್ಮಸಿಸ್ಟ್ ಗಳು ಆರೋಗ್ಯ ಕ್ಷೇತ್ರದಲ್ಲಿ ಮಹತ್ತರ ಕಾರ್ಯ ನಿರ್ವಹಿಸುತ್ತಿದ್ದು ಅವರನ್ನು ಹೆಡ್ ನರ್ಸ್ ಗಳು ಎಂದು ತಾಳಿರುವ ಭಾವನೆಯು ತೊಲಗಬೇಕಿದ್ದು, ಈ ನಿಟ್ಟಿನಲ್ಲಿ ವಿಶ್ವದಾದ್ಯಂತ ಸೆ.25ರಂದು ಪಾರ್ಮಸಿಸ್ಟ್ ದಿನಾಚರಣೆಯನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಫಾರೂಕಿಯ ಕಾಲೇಜಿನ ಪ್ರಾಂಶುಪಾಲ ಡಾ.ಮಹ್ಮದ್ ಸಲಾಲುದ್ದೀನ್, ಐಪಿಎ ಪ್ರಧಾನ ಕಾರ್ಯದರ್ಶಿ ಡಾ.ಆರ್.ಎಸ್.ಚಂದನ್, ಖಜಾಂಚಿಕ ಡಾ.ಬಿ.ಎಂ. ಗುರುಪಾದಯ್ಯ ಗೋಷ್ಠಿಯಲ್ಲಿ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: