ಪ್ರಮುಖ ಸುದ್ದಿಮೈಸೂರು

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾರು ಶ್ರೀರಂಗಪಟ್ಟಣದ ಬಳಿ ಸ್ನೇಹಿತನ ತೋಟದಲ್ಲಿ ಪತ್ತೆ

ಮೈಸೂರು,ಸೆ.24:- ನಿನ್ನೆ ತಡರಾತ್ರಿ ಅಪಘಾತಕ್ಕೀಡಾಗಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾರು ಶ್ರೀರಂಗಪಟ್ಟಣದ ಬಳಿ ಸ್ನೇಹಿತನ ತೋಟದಲ್ಲಿ ಪತ್ತೆಯಾಗಿದೆ.

ವಿವಿಪುರಂ ಠಾಣೆಯ ಪೊಲೀಸರು ಕಾರು ಇರುವ ಸ್ಥಳ ಪತ್ತೆ ಹಚ್ಚಿದ್ದಾರೆ. ಸ್ಥಳಕ್ಕೆ ಆರ್ ಟಿ ಓ ಅಧಿಕಾರಿಗಳು ಬಂದ ಬಳಿಕ  ಕಾರು ಪರಿಶೀಲನೆ ನಡೆಸಲಾಗುತ್ತದೆ. ಆರ್ ಟಿ ಓ ಅಧಿಕಾರಿಗಳು ನಂಬರ್ ಇದ್ಯಾ, ಇನ್ಶೂರೆನ್ಸ್ ಮಾಡಿಸಲಾಗಿದೆಯಾ ಎಂದು ಪರಿಶೀಲನೆ ನಡೆಸಲಿದ್ದಾರೆ. ಅಪಘಾತ ನಡೆದ ಸ್ಥಳ ವಿವಿ ಪುರಂ ಸಂಚಾರಿ ಠಾಣೆ ವ್ಯಾಪ್ತಿಗೆ ಸೇರುವ ಹಿನ್ನೆಲೆಯಲ್ಲಿ ವಿವಿಪುರಂ ಠಾಣೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಅಪಘಾತವಾದ ಬಳಿಕ ಕಾರನ್ನು  ತೋಟದಲ್ಲಿ ನಟ ದರ್ಶನ್ ಸ್ನೇಹಿತರು ತೋಟದಲ್ಲಿ ಬಚ್ಚಿಟ್ಟಿದ್ದರು ಎನ್ನಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: