ಸುದ್ದಿ ಸಂಕ್ಷಿಪ್ತ

ಮಕ್ಕಳ ಪೋಷಣೆ : ಅರ್ಜಿ ಸಲ್ಲಿಸಿ

ಮೈಸೂರು,ಸೆ.24-ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವ್ಯಾಪ್ತಿಯಲ್ಲಿರುವ ಸರ್ಕಾರಿ ಬಾಲಮಂದಿರಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳಲ್ಲಿ ಏಕಪೋಷಕ, ಅನಾಥ ಅಥವಾ ಕುಟುಂಬ ಪೋಷಣೆಯಿಂದ ವಂಚಿತವಾದ ಮಕ್ಕಳಿದ್ದು, ಇಂತಹ ಮಕ್ಕಳಿಗೆ ಸರ್ಕಾರದ ಪೋಷಕತ್ವ ಯೋಜನೆಯಲ್ಲಿ ಮಕ್ಕಳಿಗೆ ತಾತ್ಕಾಲಿಕವಾಗಿ ಕುಟುಂಬದಲ್ಲಿ ಪಾಲನೆ ಮಾಡಲು ಬಾಲನ್ಯಾಯ ಕಾಯ್ದೆ (ರಕ್ಷಣೆ ಮತ್ತು ಪೋಷಣೆ) 2015 ಸೆಕ್ಷನ್ 44 ರಡಿ ಅವಕಾಶವಿರುತ್ತದೆ.

ಸದರಿ ಮಕ್ಕಳನ್ನು ಒಂದು ವರ್ಷದ ಅವಧಿಗೆ ಕುಟುಂಬ ಪೋಷಣೆಗಾಗಿ ಮಕ್ಕಳ ಕಲ್ಯಾಣ ಸಮಿತಿಯ ಆದೇಶದ ಮೇರೆಗೆ ಕುಟುಂಬಕ್ಕೆ ಹಾಗೂ ಸಂಸ್ಥೆಗೆ ಪೋಷಕತ್ವದಡಿ ನಿಯೋಜನೆ ಮಾಡಬಹುದಾಗಿದೆ. ಇಂತಹ ಮಕ್ಕಳನ್ನು ತಾತ್ಕಾಲಿಕವಾಗಿ ತಮ್ಮ ಕುಟುಂಬದಲ್ಲಿ ಪಾಲನೆ ಹಾಗೂ ರಕ್ಷಣೆ ಜೊತೆಗೆ ಪೋಷಕರಂತೆ ಕೌಟುಂಬಿಕ ವಾತಾವರಣವನ್ನು ಕಲ್ಪಿಸಲು ಇಚ್ಛಿಸುವ ಕುಟುಂಬವು ಅರ್ಜಿಯನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಚೇರಿಯಲ್ಲಿ ಪಡೆದುಕೊಳ್ಳಬಹುದಾಗಿದೆ.

ಪೋಷಕರು ಮಾರಕವಾದ ಅನಾರೋಗ್ಯದಿಂದ ಬಳಲುತ್ತಿದ್ದು, ಮಗುವನ್ನು ನೋಡಿಕೊಳ್ಳಲು ಸಾಧ್ಯವಾಗದೇ ಇರುವ ಸಂದರ್ಭದಲ್ಲಿ ಮಗುವಿನ ಪುನರ್ವಸತಿಗಾಗಿ ಮಕ್ಕಳ ಕಲ್ಯಾಣ ಸಮಿತಿ ಅಥವಾ ಜಿಲ್ಲಾ ಮಕ್ಕಳ ರಕ್ಷಣಾ ಘಟಕವನ್ನು ಸಂಪರ್ಕಿಸಿದಲ್ಲಿ ಅಂತಹ ಮಕ್ಕಳನ್ನು ಸಹ ಪೋಷಕತ್ವದಡಿ ತಾತ್ಕಾಲಿಕವಾಗಿ ಪಾಲನೆ ಮತ್ತು ಪೋಷಣೆ ಮಾಡಲಾಗುವುದು ಇಂತಹ ಪರಿಸ್ಥಿತಿ ಇರುವ ಕುಟುಂಬಗಳು ಸಹ ಮಕ್ಕಳ ಕಲ್ಯಾಣ ಸಮಿತಿಯ ದೂ.ಸಂ. 0821-2472576 ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ದೂ.ಸಂ. 0821-2543003 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಎಂ.ಎನ್)

Leave a Reply

comments

Related Articles

error: