ಸುದ್ದಿ ಸಂಕ್ಷಿಪ್ತ

ಎನ್.ರಾಚಯ್ಯ ಅಧ್ಯಯನ ಪೀಠದ ಉದ್ಘಾಟನೆ : ಉಪನ್ಯಾಸ ನಾಳೆ

ಮೈಸೂರು,ಸೆ.24 : ಮೈವಿವಿಯ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ‘ಎನ್ ರಾಚಯ್ಯ ಅಧ್ಯಯನ ಪೀಠದ ಉದ್ಘಾಟನೆ ಹಾಗೂ ಕರ್ನಾಟಕದಲ್ಲಿ ರಾಜಕೀಯ ನಾಯಕತ್ವ’ ವಿಷಯವಾಗವಿ ಕುರಿತು ಉಪನ್ಯಾಸವನ್ನು ನಾಳೆ (25)ರ ಬೆಳಗ್ಗೆ 10.30ಕ್ಕೆ ಮಾನಸಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.

ಮಾಜಿ ಸಚಿವ ಹೆಚ್.ಆಂಜನೇಯ ಉದ್ಘಾಟಿಸಲಿದ್ದಾರೆ. ಎನ್.ರಾಚಯ್ಯ ಅಧ್ಯಯನ ಪೀಠದ ಸಂದರ್ಶಕ ಪ್ರಾಧ್ಯಾಪಕ ಪ್ರೊ.ಹೆಚ್.ಎಂ.ರಾಜಶೇಖರ ಉಪನ್ಯಾಸ ನೀಡುವರು. ಕುಲಸಚಿವ ಪ್ರೊ.ಆರ್.ರಾಜಣ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ‍್ಯಾಪಕಿ ಡಾ.ಎನ್.ಕೆ.ಲೋಲಾಕ್ಷಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ, ವಿಧಾನ ಪರಿಷತ್ ಸದಸ್ಯರಾದ ಆರ್.ಧರ್ಮಸೇನ. ಸಿ.ರಮೇಶ್ ಹಾಜರಿರಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

Check Also

Close
error: