ಸುದ್ದಿ ಸಂಕ್ಷಿಪ್ತ

“ಉಲ್ಬಣಿಸುತ್ತಿರುವ ಕೋಮುವಾದ” ವಿಚಾರ ಸಂಕಿರಣ; ಡಿ.27ಕ್ಕೆ

ದಲಿತ ಸಂಘರ್ಷ ಸಮಿತಿ, ತರಕಾರಿ ಬೆಳೆಯುವ ರೈತರು ಹಾಗೂ ಮಾರಾಟಗಾರರ ಶಾಖೆ ಹಾಗೂ ಮೈಸೂರು ತಾಲೂಕು ಶಾಖೆಯು ಜಂಟಿಯಾಗಿ ಡಾ. ಅಂಬೇಡ್ಕರ್‍ ಅವರ ಪರಿನಿರ್ವಾಣ ದಿನದ ಆಚರಣೆಯನ್ನು ಆಯೋಜಿಸಿವೆ.

ಈ ಸಂದರ್ಭ “ಉಲ್ಬಣಿಸುತ್ತಿರುವ ಕೋಮುವಾದ; ನೇಪಥ್ಯಕ್ಕೆ ಸರಿಯುತ್ತಿರುವ ಶೋಷಿತ ರಾಜಕಾರಣ” ವಿಷಯದ ಬಗ್ಗೆ ವಿಚಾರ ಸಂಕಿರಣ ನಡೆಯಲಿದೆ. ಕಳೆದ 13ರಂದು ನಿಗದಿಯಾಗಿ ಮಳೆಯ ಕಾರಣದಿಂದ ಮುಂದೂಡಲ್ಪಟ್ಟಿದ್ದ ಕಾರ್ಯಕ್ರಮವು ಡಿ.27, ಮಂಗಳವಾರ ಬೆಳಗ್ಗೆ 11 ಗಂಟೆಗೆ ಎಂ.ಜಿ. ರಸ್ತೆಯಲ್ಲಿರುವ ತರಕಾರಿ ಬೆಳೆಯುವ ರೈತರು ಹಾಗೂ ಮಾರಾಟಗಾರರ ಶಾಖೆ ಮೈದಾನದಲ್ಲಿ ನಡೆಯಲಿದೆ.

ವಿಚಾರ ಸಂಕಿರಣವನ್ನು ಆಂದೋಲನ ದಿನಪತ್ರಿಕೆಯ ಸಂಪಾದಕರಾದ ರಾಜಶೇಖರ ಕೋಟಿಯವರು ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ದಸಂಸ ಜಿಲ್ಲಾ ಸಂಚಾಲಕರಾದ ಬೆಟ್ಟಯ್ಯ ಕೋಟೆಯವರು ವಹಿಸಲಿದ್ದಾರೆ. ಮುಖ್ಯ ಭಾಷಣಕಾರರಾಗಿ ಸಾಹಿತಿ ಪ್ರೊ. ಅರವಿಂದ ಮಾಲಗತ್ತಿಯವರು ವಿಷಯ ಮಂಡಿಸಲಿದ್ದಾರೆ.

Leave a Reply

comments

Related Articles

error: