ದೇಶಪ್ರಮುಖ ಸುದ್ದಿ

ಜಾರಿ ನಿರ್ದೇಶನಾಲಯದ ವಿರುದ್ಧವೇ ಆರೋಪ ಮಾಡಿದ್ದಾರೆ ಉದ್ಯಮಿ ವಿಜಯ್ ಮಲ್ಯ

ದೇಶ(ನವದೆಹಲಿ)ಸೆ.25:- 9,000 ಕೋಟಿ ರೂಪಾಯಿ ಸಾಲ ಮರುಪಾವತಿ ಮಾಡದೆ ತಲೆತಪ್ಪಿಸಿಕೊಂಡು ಹೋಗಿರುವ ಉದ್ಯಮಿ ವಿಜಯ್ ಮಲ್ಯ ಈಗ ಜಾರಿ ನಿರ್ದೇಶನಾಲಯದ ವಿರುದ್ಧವೇ ಆರೋಪ ಮಾಡಿದ್ದಾರೆ.

ಲಂಡನ್ ನಲ್ಲಿರುವ ವಿಜಯ್ ಮಲ್ಯ ಜಾರಿ ನಿರ್ದೇಶನಾಲಯದ ವಿರುದ್ಧ ಆರೋಪ ಮಾಡಿದ್ದು, ಸಾಲ ತೀರಿಸುವ ನನ್ನ ಪ್ರಯತ್ನಗಳನ್ನು ಪ್ರತಿರೋಧಿಸಿದ್ದು ಜಾರಿ ನಿರ್ದೇಶನಾಲಯವೇ ಎಂದು ಹೇಳಿದ್ದಾರೆ. ಮುಂಬೈ ಕೋರ್ಟ್ ಗೆ ವಿಜಯ್ ಮಲ್ಯ ತಮ್ಮ ವಕೀಲರ ಮೂಲಕ ಈ ಹೇಳಿಕೆ ನೀಡಿದ್ದಾರೆ.

ಜಾರಿ ನಿರ್ದೇಶನಾಲಯ ತಮ್ಮನ್ನು ದೇಶಭ್ರಷ್ಟ ಎಂದು ಘೋಷಿಸಿರುವುದಕ್ಕೆ ವಿಜಯ್ ಮಲ್ಯ ಆಕ್ಷೇಪ ವ್ಯಕ್ತಪಡಿಸಿದ್ದು, ಸಾಲ ಮರುಪಾವತಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ಅಧಿಕಾರಿಗಳಿಗೆ ಸಹಕರಿಸುತ್ತಿದ್ದೇನೆ ಎಂದು ವಕೀಲರ ಮೂಲಕ ಹೇಳಿಕೆ ನೀಡಿ ಸಮರ್ಥಿಸಿಕೊಂಡಿದ್ದಾರೆ.

ಕಳೆದ 2-3 ವರ್ಷಗಳಿಂದ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳ ಸಾಲ ಮರುಪಾವತಿ ಮಾಡುವುದಕ್ಕೆ ಯತ್ನಿಸುತ್ತಿದ್ದೇನೆ, ಆದರೆ ನನ್ನ ಪ್ರಯತ್ನಕ್ಕೆ, ಸಾಲ ತೀರಿಸುವ ಪ್ರಕ್ರಿಯೆಗೆ ನೆರವು ನೀಡುವುದರ ಬದಲು ಜಾರಿ ನಿರ್ದೇಶನಾಲಯ ನನ್ನ ಪ್ರಯತ್ನಗಳಿಗೆ ಪ್ರತಿರೋಧಿಸಿತ್ತು ಎಂದು ವಿಜಯ್ ಮಲ್ಯ ಆರೋಪ ಮಾಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: