ಪ್ರಮುಖ ಸುದ್ದಿಮೈಸೂರು

ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಕಿಚ್ಚ ಸುದೀಪ್ ಸೇರಿದಂತೆ ನಟ-ನಟಿಯರಿಂದ ಹಾರೈಕೆ

ಮೈಸೂರು,ಸೆ.25:- ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅಪಘಾತದಲ್ಲಿ ಕೈಮೂಳೆ ಮುರಿತಕ್ಕೊಳಗಾಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದು, ಚಂದನವನದ ನಟ-ನಟಿಯರು ಶೀಘ್ರವಾಗಿಯೇ ದರ್ಶನ್ ಗುಣಮುಖವಾಗಲೆಂದು ಹಾರೈಸಿದ್ದಾರೆ. ಅಷ್ಟೇ ಅಲ್ಲದೇ ನಟರಾದ ದೇವರಾಜ್ ಹಾಗೂ ಪ್ರಜ್ವಲ್ ದೇವರಾಜ್ ಅವರೂ ಕೂಡ ಶೀಘ್ರವಾಗಿ ಗುಣಮುಖರಾಗಲೆಂದು ಹಾರೈಸಿದ್ದಾರೆ.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಟ್ವೀಟ್ ಮೂಲಕ ಶೀಘ್ರ ಗುಣಮುಖವಾಗುವಂತೆ ಹಾರೈಸಿದ್ದಾರೆ. ನೀವು ಚೆನ್ನಾಗಿದ್ದೀರಿ ಎನ್ನುವುದು ನನಗೆ ತಿಳಿಯಿತು.ಶೀಘ್ರವೇ ಗುಣಮುಖರಾಗಿ ಎಂದು ನಾನು ಹಾರೈಸುತ್ತೇನೆ. ಗೆಟ್ ವೆಲ್ ಸೂನ್ ಮೈ ಫ್ರೆಂಡ್ ಎಂದು ಬರೆದುಕೊಂಡಿದ್ದಾರೆ.

ಒಳ್ಳೆ ಹುಡ್ಗ ಪ್ರಥಮ್ ಕೂಡ ಟ್ವೀಟರ್ ನಲ್ಲಿ ದರ್ಶನ್ ಅವರ ಭಾವಚಿತ್ರಕ್ಕೆ ಬಾಸ್ ಗೆಟ್ ವೆಲ್ ಸೂನ್ ಎಂದು ಬರೆದುಕೊಂಡಿದ್ದು,ಆಗಷ್ಟೇ ಮಾತನಾಡಿದ ವಿವರಗಳನ್ನು ಹಂಚಿಕೊಂಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: