ಮೈಸೂರು

ಕೃಷ್ಣ ಕೊಲೆ ಪ್ರಕರಣ: ಆರೋಪಿಗಳು ಡಿ.31ರ ವರೆಗೆ ಪೊಲೀಸ್ ಕಸ್ಟಡಿಗೆ

ಮೈಸೂರಿನ ವಿವಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ವಿವಿ ಮೊಹಲ್ಲಾ 6ನೇ ಮುಖ್ಯರಸ್ತೆಯಲ್ಲಿ ಶುಕ್ರವಾರ ಹಾಡಹಗಲೇ ಪಡುವಾರಹಳ್ಳಿ ಚಿಕನ್ ಸೆಂಟರ್ ಕೃಷ್ಣ ಅಲಿಯಾಸ್ ಬೆಣ್ಣೆ ಕೃಷ್ಣನನ್ನು ಮುಸುಕುಧಾರಿಗಳು ಬರ್ಬರವಾಗಿ ಹತ್ಯೆಗೈದಿದ್ದರು. ಬಂಧಿತರನ್ನು ಡಿ.31ರ ವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

ಕೊಲೆ ಕೃತ್ಯದಲ್ಲಿ ಭಾಗಿಯಾದ ರೌಡಿಶೀಟರ್ ಗಳಾದ ವಿನಾಯಕ ನಗರದ ಭರತ್ ಕುಮಾರ್, ಅಲಿಯಾಸ್ ಭರತ್(29), ಹೇಮಂತ್(29), ಸಂದೇಶ್(23), ಮೂರ್ತಿ ಅಲಿಯಾಸ್ ಕಾಟು(26), ಅಶೋಕ(32), ಚಾಮುಂಡಿಬೆಟ್ಟದ ಸಂಜು ಅಲಿಯಾಸ್ ಸ್ಯಾಮ್ ಸನ್(29), ಸಿದ್ದರಾಮನ ಹುಂಡಿಯ ಧರ್ಮೇಂದ್ರ ಅಲಿಯಾಸ್ ಧರ್ಮ (27) ಇವರನ್ನು ಬಂಧಿಸಲಾಗಿತ್ತು.

ಬಂಧಿತರನ್ನು ಡಿಸೆಂಬರ್ 31ರ ವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಇನ್ನುಳಿದಿರುವ ಆರೋಪಿಗಳನ್ನು ಹುಡುಕಲು ಪೊಲೀಸ್ ತಂಡ ರಚಿಸಲಾಗಿದ್ದು, ತಂಡವು ಮಂಡ್ಯ, ಬೆಂಗಳೂರು, ಮಡಿಕೇರಿಗಳಿಗೆ ತೆರಳಿವೆ. ಆರೋಪಿಗಳು ಕೊಲೆ ಕೃತ್ಯಕ್ಕೆ ಬಳಸಲಾದ ಕಾರು, ಮಚ್ಚು, ಲಾಂಗ್ ಗಳು ಹಾಗೂ ಬೈಕ್ ನ್ನು ವಶಕ್ಕೆ ಪಡೆಯಲಾಗಿದೆ.

ನ್ಯಾಯಾಲಯದ ಆದೇಶದ ಮೇರೆಗೆ ಡಿ.31ರ ವರೆಗೆ ಬಂಧಿತರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ ಎಂದು ತಿಳಿದುಬಂದಿದೆ.

Leave a Reply

comments

Related Articles

error: