ಪ್ರಮುಖ ಸುದ್ದಿಮೈಸೂರು

ಬಿಜೆಪಿಯಿಂದ ಯಾವ ಶಾಸಕರನ್ನು ಖರೀದಿಸಲು ಸಾಧ್ಯವಿಲ್ಲ : ಮಾಜಿ ಸಚಿವ ಹೆಚ್ ಆಂಜನೇಯ

ಮೈಸೂರು,ಸೆ.25:- ಬಿಜೆಪಿಯಿಂದ ಯಾವ ಶಾಸಕರನ್ನು ಖರೀದಿಸಲು ಸಾಧ್ಯವಿಲ್ಲ  ಎಂದು ಮಾಜಿ ಸಚಿವ ಹೆಚ್ ಆಂಜನೇಯ ತಿಳಿಸಿದ್ದಾರೆ.

ಮಾನಸ ಗಂಗೋತ್ರಿಯಲ್ಲಿ  ಆಯೋಜಿಸಿದ್ದ  ಎನ್ ರಾಚಯ್ಯ  ಅಧ್ಯಯನ  ಪೀಠದ  ಉದ್ಘಾಟನೆ ಹಾಗೂ  ಉಪನ್ಯಾಸ ಕಾರ್ಯಕ್ರಮದಲ್ಲಿ  ಪಾಲ್ಗೊಂಡ ಅವರು ಬಳಿಕ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿ  ರಾಜ್ಯದಲ್ಲಿ ಯಾವುದೇ ರೆಸಾರ್ಟ್ ರಾಜಕಾರಣ ನಡೆಯುತ್ತಿಲ್ಲ. ಬಿಜೆಪಿಯವರಿಗೆ ಅಧಿಕಾರದ ದಾಹ, ಹಣದ ಕೊಬ್ಬು  ಇದೆ. ಕೇಂದ್ರ ದಲ್ಲಿ ನಮ್ಮದೇ ಸರ್ಕಾರವಿದೆ  ಎನ್ನುವ ಮನೋಭಾವನೆ ಇದೆ. ಹಾಗಾಗಿ ವಾಮಮಾರ್ಗವಾಗಿ  ಸರ್ಕಾರವನ್ನು  ಕೆಡವಲು ಪ್ರಯತ್ನ ಪಡುತ್ತಿದ್ದಾರೆ, ಆದರೆ  ಅದು ಸಾಧ್ಯವಿಲ್ಲ ಎಂದರು.

ಬಿಜೆಪಿಯವರು ಈ ಹಿಂದೆ ಕೆಲ ಶಾಸಕರನ್ನು ಖರೀದಿ ಮಾಡಿದರು. ಆದರೆ ಈಗ ಅದು ಸಾಧ್ಯವಿಲ್ಲ. ಯಾವ ಶಾಸಕರನ್ನೂ ಬಿಜೆಯವರು  ಖರೀದಿ ಮಾಡಲು ಸಾಧ್ಯವೇ ಇಲ್ಲ. ಬಿಜೆಪಿಯಿಂದ ಯಾವುದೇ ಶಾಸಕರನ್ನು ಆಪರೇಷನ್ ಕಮಲ ಬಲೆಗೆ ಸೆಳೆಯಲು ಆಗಲ್ಲ. ಯಾರನ್ನು ಆಪರೇಷನ್ ಮಾಡಲು ಸಾಧ್ಯವಿಲ್ಲ.

ಶಾಸಕರು ಜನರಿಂದ ಆಯ್ಕೆ ಗೊಂಡಿದ್ದಾರೆ. ಹಾಗಾಗಿ ಜನಸಾಮಾನ್ಯರಿಗೆ  ಮೋಸ ಮಾಡುವ ಕೆಲಸ ಯಾರೂ ಮಾಡಲಾರರು  ಎಂದು ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: