ದೇಶ

ಬೇನಾಮಿ ಆಸ್ತಿ ಗಳಿಕೆ ವಿರುದ್ಧ ಪ್ರಬಲ ಕಾನೂನು ತರಲಿದ್ದೇವೆ: ಪ್ರಧಾನಿ ನರೇಂದ್ರ ಮೋದಿ

ಬೇನಾಮಿ ಆಸ್ತಿ ಗಳಿಕೆ ವಿರುದ್ಧ ಪ್ರಬಲ ಕಾನೂನು ತರಲು ಕೇಂದ್ರ ಸರ್ಕಾರ ತಯಾರಿಯಲ್ಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

“ನೋಟು ರದ್ದತಿ ಬಗ್ಗೆ ಒಂದೇ ಸಮನೆ ಟೀಕೆ ಮಾಡುತ್ತಿರುವ ಪ್ರತಿಪಕ್ಷಗಳಿಗೆ ಉಸಿರುಗಟ್ಟುವ ಅನುಭವವಾಗುತ್ತಿದೆ. ಹಾಗಾಗಿ ಜನರ ಹೆಸರು ಹೇಳಿ ನೋಟು ರದ್ದತಿಯ ಕುರಿತು ನಿರಂತರ ಟೀಕೆ, ಪ್ರತಿಭಟನೆಗೆ ಇಳಿದಿವೆ. ಆದರೆ ದೇಶದ ಜನ ತಮಗೆ ತೊಂದರೆಯಾದರೂ ಸರ್ಕಾರಕ್ಕೆ ಬೆಂಬಲ ನೀಡಿದ್ದಾರೆ. ಜನತೆಗೆ ನಾನು ಆಭಾರಿ ಎಂದು ಪ್ರಧಾನಿ ಹೇಳಿದ್ದಾರೆ.

ಕಪ್ಪು ಹಣದ ವಿರುದ್ಧದ ನಮ್ಮ ಹೋರಾಟ ನಿಲ್ಲುವುದಿಲ್ಲ. ಬೇನಾಮಿ ಆಸ್ತಿ ಗಳಿಕೆಯ ವಿರುದ್ಧವೂ ಕೇಂದ್ರ ಸರ್ಕಾರ ಪ್ರಬಲ ಕಾನೂನು ತರುವ ತಯಾರಿಯಲ್ಲಿದೆ ಎಂದಿದ್ದಾರೆ. ಇದರಿಂದ ಬೇನಾಮಿ ಆಸ್ತಿಗಳ ಮೇಲೆ ಕಪ್ಪು ಹಣ ಹೂಡಿಕೆ ಮಾಡುತ್ತಿದ್ದವರಿಗೆ ಇನ್ನುಮುಂದೆ ಕಡಿವಾಣ ಬೀಳುವುದು ನಿಶ್ಚಿತವಾದಂತಾಗಿದೆ.

Leave a Reply

comments

Related Articles

error: