ಮೈಸೂರು

ಆಡಳಿತದಲ್ಲಿ ಸುಧಾರಣೆ ತರಲು ತರಬೇತಿ ಅವಶ್ಯ: ಶೇಖರ್ ಗೌಡ ಮಾಲಿ ಪಾಟೀಲ್

ಆಡಳಿತದಲ್ಲಿ ಸುಧಾರಣೆ ತರಲು ಇಂದಿನ ಜೀವನದಲ್ಲಿ ತರಬೇತಿಯ ಅವಶ್ಯಕತೆಯಿದೆ ಎಂದು ಬೆಂಗಳೂರಿನ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ  ಶೇಖರ್ ಗೌಡ ಮಾಲಿ ಪಾಟೀಲ್ ತಿಳಿಸಿದರು.

ಮೈಸೂರಿನ ಭಾರತೀಯ ಭಾಷೆಗಳ ಸಂಸ್ಥೆಯಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ರಾಜ್ಯ ಪಟ್ಟಣ ಸಹಕಾರ ಬ್ಯಾಂಕ್ ಗಳ ಮಹಾಮಂಡಳ, ಮೈಸೂರು ಜಿಲ್ಲಾ ಸಹಕಾರ ಒಕ್ಕೂಟ ಹಾಗೂ ಸಹಕಾರ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮವನ್ನು ಶೇಖರ್ ಗೌಡ ಮಾಲಿ ಪಾಟೀಲ್ ದೀಪ ಬೆಳಗುವ ಮೂಲಕ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಡಿಸಿಸಿ ಬ್ಯಾಂಕ್ ಗಳ ನಿರ್ದೇಶಕರಿಗೂ ಕೂಡ ಹೊಸ ಕಾರ್ಯಕ್ರಮ ಹಾಗೂ ತರಬೇತಿ ನೀಡುವ ಕೆಲಸಕ್ಕೆ ಮಹಾಮಂಡಲ ಮುಂದಾಗಿದೆ. ಉತ್ತಮವಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ಈ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಇತ್ತಿಚೆಗೆ ಸರ್ಕಾರದಿಂದ ಹೊಸ ಯೋಜನೆಗಳು ಬರುತ್ತಿರುವ ಹಿನ್ನಲೆಯಲ್ಲಿ, ಜೊತೆಗೆ ಆಡಳಿತದಲ್ಲಿ ಸುಧಾರಣೆ ತರಲು ಈ ರಾಜ್ಯಮಟ್ಟದ ಈ ತರಬೇತಿ ನೀಡಲಾಗುತ್ತಿದೆ ಎಂದರು. ಇಂದಿನ ಜೀವನದಲ್ಲಿ ತರಬೇತಿ ಎನ್ನುವುದು ನಿತ್ಯ ನಿರಂತರವಾದ್ದು. ಅದರ ಉಪಯುಕ್ತತೆಯನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಮೈಸೂರು ಮತ್ತು ಚಾಮರಾಜ ನಗರದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಎಸ್. ಚಂದ್ರಶೇಖರ್ ಮಾತನಾಡಿ, ಸಹಕಾರಿ ಬ್ಯಾಂಕ್ ಯಾವುದೇ ರಾಷ್ಟ್ರೀಯ ಬ್ಯಾಂಕ್ ಗಳಿಗೆ ಕಡಿಮೆ‌ ಇಲ್ಲ ಎಂದರು.

ಮೈಸೂರು ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಹೆಚ್.ವಿ. ರಾಜೀವ್ ಮಾತನಾಡಿ, ನೋಟು ಅಮಾನ್ಯೀಕರಣ ಆದ ನಂತರ ಸಹಕಾರಿ ಕ್ಷೇತ್ರದಲ್ಲಿ ಈಗ ತೆಗೆದುಕೊಂಡಿರುವ ನಿರ್ಣಯಗಳು ಸೂಕ್ತವಾಗಿದೆ. ಮುಂದಿನ ದಿನದಲ್ಲಿ ಸಹಕಾರಿ ಕ್ಷೇತ್ರದ ಮೇಲೆ ಹೊಡೆತ ಬೀಳುವ ಸಾಧ್ಯತೆ ಇದೇಯೆ ಎನ್ನುವ ಆತಂಕ ಕಾಡಿದೆ. ಈ ದೃಷಿಯಲ್ಲಿ ಯಾವ ರೀತಿ ಎಚ್ಚರಿಕೆಯಿಂದ ನಡೆಯಬೇಕು ಎನ್ನುವುದು ಈ ಕಾರ್ಯಕ್ರಮದಲ್ಲಿ ಚರ್ಚೆ ಆಗಬೇಕಿದೆ ಎಂದರು.

ಮೈಸೂರು ಜಿಲ್ಲೆಯಲ್ಲಿನ ಪಟ್ಟಣ ಸಹಕಾರ ಬ್ಯಾಂಕ್ ಗಳ ಅಧ್ಯಕ್ಷರು, ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ತರಬೇತಿಯನ್ನು ನೀಡಲಾಯಿತು.

Leave a Reply

comments

Related Articles

error: