ದೇಶಪ್ರಮುಖ ಸುದ್ದಿ

ಅಯೋಧ್ಯೆಯಲ್ಲಿ ಮಂದಿರವೋ, ಮಸೀದಿಯೋ? ಸೆ.29ರಂದು 16 ಕೇಸುಗಳ ತೀರ್ಪು!

ನವದೆಹಲಿ (ಸೆ.25): ಅಯೋಧ್ಯೆ ರಾಮ ಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇದೇ ಸೆ.29ರ ಶುಕ್ರವಾರ ಮಹತ್ವದ ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಇದೇ ವೇಳೆ ಮುಸ್ಲಿಮರು ನಮಾಜ್ ಮಾಡಲು ಮಸೀದಿಯೇ ಆಗಬೇಕೆ ಅಥವಾ ಎಲ್ಲಿ ಬೇಕಾದರೂ ನಮಾಜ್ ಮಾಡಬಹುದೇ ಎಂಬ ವಿಷಯದ ಕುರಿತೂ ಸುಪ್ರೀಂ ಕೋರ್ಟ್ ಶುಕ್ರವಾರ ತೀರ್ಪು ನೀಡಲಿದೆ ಎನ್ನಲಾಗಿದೆ.

ಇದರ ಜೊತೆಗೆ ಮಸೀದಿ ಇಸ್ಲಾಂ ಧರ್ಮದ ಬಹುಮುಖ್ಯ ಅಂಗವೇ ಎಂಬುದರ ಕುರಿತೂ ಚರ್ಚೆ ನಡೆಯಲಿದೆ. ಇದರಿಂದಾಗಿ ಈ ತೀರ್ಪು ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದಂತೆ ಮಾತ್ರವಲ್ಲ ಭವಿಷ್ಯದ ತೀರ್ಪುಗಳಿಗೆ ಪ್ರಭಾವ ಬೀರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ತೀರ್ಪು ಭಾರೀ ಮಹತ್ವ ಪಡೆದುಕೊಂಡಿದೆ.

ಒಂದೇ ದಿನ ಹೊರ ಬೀಳಲಿದೆ ಮಹತ್ವದ 16 ಪ್ರಕರಣಗಳ ತೀರ್ಪು!

ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು, ಇದೇ ಅ.2ರಂದು ನಿವೃತ್ತಿ ಹೊಂದಲಿದ್ದು, ಅಂದು ಮಿಶ್ರಾ ಅವರು ಈಗಾಗಲೇ ತಮ್ಮ ನೇತೃತ್ವದ ಪೀಠದಲ್ಲಿ ವಿಚಾರಣೆ ನಡೆಸಿದ್ದ 16 ಕೇಸಿನ ತೀರ್ಪು ಪ್ರಕಟಿಸಲಿದ್ದಾರೆ.

ಮುಖ್ಯವಾಗಿ ರಾಮ ಜನ್ಮಭೂಮಿ-ಬಾಬ್ರಿ ಮಸೀದಿ, ಉದ್ಯೋಗ ಬಡ್ತಿ ಮೀಸಲು, ಆಧಾರ್, ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶ, ವ್ಯಭಿಚಾರವನ್ನು ಅಪರಾಧ ಎಂದು ಪರಿಗಣಿಸುವ ಸಂವಿಧಾನದ 497ನೇ ವಿಧಿ ರದ್ದು ಕೋರಿದ್ದ ಅರ್ಜಿ, ರಾಜ್ಯಗಳಿಗೂ ಆರ್‌ಟಿಐ ಕಾಯ್ದೆ ತಿದ್ದುಪಡಿ ಮಾಡಲು ಅವಕಾಶ, ಅಹಮದ್ ಪಟೇಲ್ ರಾಜ್ಯಸಭೆ ಚುನಾವಣೆ ಪ್ರಕರಣ, ರಾಘವೇಂದ್ರ ಸ್ವಾಮಿ ಮಠ ಮತ್ತು ಉತ್ತರಾಧಿ ಮಠದ ನಡುವಿನ ಪ್ರಕರಣಗಳು ಕೂಡಾ ಸೇರಿವೆ ಎಂಬುದು ವಿಶೇಷ. (ಎನ್.ಬಿ)

Leave a Reply

comments

Related Articles

error: