ಮೈಸೂರು

ಸೆ. 27ರಂದು ‘ಶಾಂತಿಯೆಡೆಗೆ ನಮ್ಮ ನಡಿಗೆ’ ಜಾಗೃತಿ ಜಾಥಾ

ಕೋಟೆ ಆಂಜನೇಯ ದೇವಸ್ಥಾನದ ಮುಂಭಾಗ 'ಮಾನವ ಸರಪಳಿ'

ಮೈಸೂರು,ಸೆ.25 : ಭಾರತದ ಸಂವಿಧಾನ ಸುರಕ್ಷತೆ ಹಾಗೂ ಶಾಂತಿ ಸೌಹಾರ್ದತೆಗಾಗಿ ‘ಶಾಂತಿಯೆಡೆಗೆ ನಮ್ಮ ನಡಿಗೆ’ ಎಂಬ ಶೀರ್ಷಿಕೆಯಡಿ ಮಹಿಳಾ ತಂಡಗಳು ದೇಶದಾದ್ಯಂತ ಜಾಗೃತಿ ಯಾತ್ರೆ ಕೈಗೊಂಡಿದ್ದು ಆ ಯಾತ್ರೆಯು ನಾಳೆ ನಗರಕ್ಕೆ ಆಗಮಿಸಲಿದೆ ಎಂದು ಮಹಿಳಾ ಹೋರಾಟಗಾರ್ತಿ ಡಾ.ರಾಮೇಶ್ವರಿ ವರ್ಮ ತಿಳಿಸಿದರು.

ಮಂಗಳವಾರ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಐದು ಮಹಿಳಾ ತಂಡಗಳು ದೇಶದಾದ್ಯಂತ ಸಂಚರಿಸುತ್ತಿದ್ದು ನಾಳೆ (26)ರಂದು ಒಂದು ತಂಡವು ಕೇರಳದಿಂದ ನಗರಕ್ಕೆ ಆಗಮಿಸುತ್ತಿದ್ದು, ತಂಡದಲ್ಲಿ ಗುಜರಾತ್, ಕಾಶ್ಮೀರ್, ಮಹಾರಾಷ್ಟ್ರ, ದೆಹಲಿ, ರಾಜಸ್ಥಾನ, ಛತ್ತಿಸ್ ಗಡ್ ಮುಂತಾದ ರಾಜ್ಯಗಳ ಪ್ರತಿನಿಧಿಗಳು ಭಾಗಿಯಾಗಿದ್ದು, ನಾಳೆ ಅವರುಗಳು ಶಕ್ತಿಧಾಮದಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ಸೆ.27ರ ಬೆಳಗ್ಗೆ 9 ಗಂಟೆಗೆ ಕೋಟೆ ಆಂಜನೇಯ ದೇವಸ್ಥಾನದ ಬಳಿ ಮಾನವ ಸರಪಳಿ ರಚಿಸಿ ಜಾಗೃತಿ ಮೂಡಿಸಲಾಗುವುದು, ಇದರೊಂದಿಗೆ ಪುರಭವನದವರೆಗೂ ನಡಿಗೆ ಮೂಲಕ ತೆರಳಿ ಭಿತ್ತಿಪತ್ರಗಳನ್ನು ವಿತರಿಸಲಾಗುವುದು. ಶಕ್ತಿಧಾಮ, ಸ್ವರಾಜ್ ಅಭಿಯಾನ್, ಒಡನಾಡಿ, ಓಡಿಪಿ, ಆರ್ ಎಲ್ ಎಚ್.ಪಿ ಅಭಿರುಚಿ ಪ್ರಕಾಶನ, ರಾಜ್ಯ ರೈತಸಂಘ ಹಾಗೂ ಮಹಾರಾಜ ಕಾಲೇಜಿನ ಬಹುಮುಖಿ ತಂಡ, ಪ್ರಗತಿಪರ ಸಂಘಟನೆಗಳು ಭಾಗಿಯಾಗಲಿವೆ ಎಂದು ತಿಳಿಸಿದರು.

ನಾಳೆ ಆಗಮಿಸುವ ತಂಡದ ಮತ್ತೊಂದಿಷ್ಟು ಸದಸ್ಯರು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಮಧ್ಯಾಹ್ನ 1 ರಿಂದ ಆಯೋಜಿಸಿರುವ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ರೈತ ಸಂಘದ ನೇತ್ರಾವತಿ, ಓಡಿಪಿಯ ಸುನೀತಾ, ಒಡನಾಡಿಯ ಸಿ.ಪಿ.ಕವಿತಾ, ಶಾಲಿನಿ, ಅಭಿರುಚಿ ಗಣೇಶ್ ಗೋಷ್ಠಿಯಲ್ಲಿ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: