ಮೈಸೂರು

ಸಾಕ್ಷ್ಯ ಹೇಳಿದಲ್ಲಿ ಕೊಲೆ ಬೆದರಿಕೆ : ದೂರು

ಮೈಸೂರು,ಸೆ.25:- ಮಗಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ಹೇಳಿದಲ್ಲಿ ಕೊಲೆ ಮಾಡುವುದಾಗಿ ತಂದೆಗೆ ಬೆದರಿಕೆ ಒಡ್ಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ನಗರದ ಚಾಮುಂಡಿಪುರಂ ನಿವಾಸಿ ಬಾಲಾಜಿ ಎಂಬವರ ಮಗಳ ಹತ್ಯೆಯಾಗಿದ್ದು, ಈ ಕುರಿತು ಅವರ ಅಳಿಯ ರಾಜೇಶ್, ಅವರ ತಮ್ಮ ರಾಕೇಶ್, ತಂದೆ  ಪ್ರಕಾಶ್ ಹಾಗೂ ತಾಯಿ ಗಾಯತ್ರಿ ಅವರನ್ನು ಬಂಧಿಸಲಾಗಿತ್ತು. ನ್ಯಾಯಾಂಗ ವಶಕ್ಕೂ ಒಪ್ಪಿಸಲಾಗಿತ್ತು. ಜಾಮೀನಿನ ಮೇಲೆ ಹೊರಬಂದ ಅವರು ಸೆ.21ರಂದು ಬಾಲಾಜಿ ಅವರ ಮನೆಗೆ ಬಂದು ನಾವು ಪ್ರಭಾವಿ ವ್ಯಕ್ತಿಗಳಾಗಿದ್ದೇವೆ. ನೀವೇನಾದರೂ ನ್ಯಾಯಾಲಯದಲ್ಲಿ ನಮ್ಮ ವಿರುದ್ಧ ಸಾಕ್ಷಿ ಹೇಳಿದರೆ ನಿಮ್ಮನ್ನು ಹಾಗೂ ನಿಮ್ಮ ಹೆಂಡತಿ, ಮಗನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆಂದು ಕೆ.ಆರ್.ಪೊಲೀಸ್ ಠಾಣೆಯಲ್ಲಿ ಬಾಲಾಜಿ ದೂರು ದಾಖಲಿಸಿದ್ದಾರೆ. (ಕೆ,ಎಸ್,ಎಸ್,ಎಚ್)

Leave a Reply

comments

Related Articles

error: