ಸುದ್ದಿ ಸಂಕ್ಷಿಪ್ತ

ಸೆ.26 ರಿಂದ 28 ರವರೆಗೆ ನೀರು ವ್ಯತ್ಯಯ

ಮೈಸೂರು,ಸೆ.25-ನಂಜನಗೂಡು ನಗರಸಭೆ ವ್ಯಾಪ್ತಿಯ ಆರ್.ಪಿ ರಸ್ತೆಯಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ಕಾಂಕ್ರಿಟ್ ರಸ್ತೆ ನಿರ್ಮಿಸುವ ಸಲುವಾಗಿ ಚರಂಡಿ ಪಕ್ಕದಲ್ಲಿ ಲೋಕೋಪಯೋಗಿ ಇಲಾಖೆ ಅಡಿಯಲ್ಲಿ ಹೊಸದಾಗಿ ಪೈಪ್‍ಲೈನ್‍ಗಳನ್ನು ಅಳವಡಿಸಿದ್ದು, ಕೆ.ಎಂ.ಆರ್.ಪಿ ವತಿಯಿಂದ ಈಗಾಗಲೇ ಅಳವಡಿಸಿರುವ ಪೈಪ್‍ಲೈನ್ ನಲ್ಲಿ ಸಂಪರ್ಕಕ್ಕೆ ಜೋಡಣೆ ಮಾಡುವ ಸಲುವಾಗಿ ಸೆ.26 ರಿಂದ 28 ರವರೆಗೆ ತಾತ್ಕಾಲಿಕವಾಗಿ ವಲಯ-01 ಮತ್ತು 02 ರಲ್ಲಿ ನೀರು ಸರಬರಾಜು ಮಾಡಲು ಸಾಧ್ಯವಾಗುವುದಿಲ್ಲ.

ಆದ್ದರಿಂದ ಇತರೆ ಮೂಲಗಳಾದ ಕೈ-ಪಂಪ್ ಮತ್ತು ಬೊರ್‍ವೆಲ್‍ಗಳಿಂದ ಕುಡಿಯುವ ನೀರನ್ನು ಬಳಸಿಕೊಂಡು ಶೇಖರಿಸಿಕೊಳ್ಳಲು ವಿನಂತಿಸಿದೆ. ನಂಜನಗೂಡು ಪಟ್ಟಣದ ನಿವಾಸಿಗಳು ಮತ್ತು ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸುವಂತೆ ನಂಜನಗೂಡು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಎಂ.ಎನ್)

Leave a Reply

comments

Related Articles

error: