ಸುದ್ದಿ ಸಂಕ್ಷಿಪ್ತ

ಸೆ.26 ರಂದು ಗ್ರಾಹಕರ ಕುಂದು ಕೊರತೆ ಸಭೆ

ಮೈಸೂರು,ಸೆ.25-ನಂಜನಗೂಡು ತಾಲ್ಲೂಕಿನ ಉಪವಿಭಾಗಗಳಲ್ಲಿ ಅಧೀಕ್ಷಕ ಇಂಜಿನಿಯರ್ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಆವರಣದಲ್ಲಿ ಸೆ.26 ರಂದು ಬೆಳಿಗ್ಗೆ 11 ಗಂಟೆಗೆ ವಿದ್ಯುತ್ ಗ್ರಾಹಕರ ಕುಂದು ಕೊರತೆ ಸಭೆ ನಡೆಯಲಿದೆ.

ನಂಜನಗೂಡು-1 ಉಪವಿಭಾಗದ ಗ್ರಾಹಕರು ನಂಜನಗೂಡು ಪಟ್ಟಣ, ತಾಂಡವಪುರ, ಕೆ.ಎಸ್. ಹುಂಡಿ, ಹುಳಿಮಾವು, ಹದಿನಾರು, ಹೊಸಕೋಟೆ, ತುಂಬನೇರಳೆ, ಮರಳೂರು, ಬಿಳಿಗೆರೆ, ಸುತ್ತೂರು, ನಗರ್ಲೆ, ಹೊರಳವಾಡಿ, ಕೂಡ್ಲಾಪುರ, ದೇವರಸನಹಳ್ಳಿ ಕಳಲೆ, ಸಿಂಧುವಳ್ಳಿ, ಕಸುವಿನಹಳ್ಳಿ, ದೇವೀರಮ್ಮನಹಳ್ಳಿ, ನವಿಲೂರು, ದೇಬೂರು ಹಾಗೂ ನಂಜನಗೂಡು-2 ಉಪವಿಭಾಗದ ಗ್ರಾಹಕರು ಬದನವಾಳು,  ದೇವನೂರು, ದೊಡ್ಡಕವಲಂದೆ,  ಹೆಡತಲೆ, ಹೆಮ್ಮರಗಾಲ, ಕೊಣನೂರು, ನೇರಳೆ, ಹೆಗ್ಗಡಹಳ್ಳಿ, ಶಿರಮಳ್ಳಿ, ಹಗಿನವಾಳು, ಹುಲ್ಲಹಳ್ಳಿ, ರಾಂಪುರ, ಕುರಿಹುಂಡಿ, ನೆಲ್ಲಿತಾಳಪುರ, ಹರದನಹಳ್ಳಿ, ದುಗ್ಗಳ್ಳಿ, ಹುರಾ,ಹಲ್ಲರೆ,ಹಾಡ್ಯಾ, ದೇವರಾಯಶೆಟ್ಟಿಪುರ, ಹೆಡಿಯಾಲ, ದಾಸನೂರು, ಕಾರ್ಯ, ಮಲ್ಲೂಪುರ, ತಗಡೂರು, ತಾಯೂರುಗಳಲ್ಲಿ ಗ್ರಾಹಕರ ಕುಂದು ಕೊರತೆ ಸಭೆ ನಡೆಯಲಿದ್ದು, ಸಾರ್ವಜನಿಕರು ಕುಂದುಕೊರತೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಬಹುದು ಎಂದು ಸೆಸ್ಕ್, ನಂಜನಗೂಡು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಎಂ.ಎನ್)

 

Leave a Reply

comments

Related Articles

error: