ಮೈಸೂರು

ನಾಡ ಹಬ್ಬ ದಸರಾದಲ್ಲಿ ಹಿರಿಯ ನಾಗರೀಕರ ಕ್ರೀಡಾಕೂಟಕ್ಕೆ ಒತ್ತಾಯ

ಮೈಸೂರು,ಸೆ.25 : ವಿಶ್ವವಿಖ್ಯಾತ ನಾಡ ಹಬ್ಬ ದಸರಾ ಕ್ರೀಡಾ ಕೂಟದಲ್ಲಿ ಹಿರಿಯ ನಾಗರೀಕರ ಕ್ರೀಡಾ ಸ್ಪರ್ಧೆಯನ್ನು ಯಥಾಸ್ಥಿತಿಯಲ್ಲಿ ನಡೆಸಬೇಕೆಂದು ಹಿರಿಯ ನಾಗರೀಕರ ಸಕಾಲ ಸೇವಾ ಕೇಂದ್ರ ಟ್ರಸ್ಟ್ ಒತ್ತಾಯಿಸಿದೆ.

ಹಿರಿಯ ನಾಗರೀಕರಿಗಾಗಿ ಆಯೋಜಿಸಿದ್ದ ಕ್ರೀಡಾಕೂಟವನ್ನು 2018ರ ದಸರಾದಲ್ಲಿ ರದ್ದುಗೊಳಿಸಿರುವುದನ್ನು ತೀವ್ರವಾಗಿ ಖಂಡಿಸಿದ್ದು, ಈ ಕ್ರೀಡಾಕೂಟವನ್ನು ನಡೆಸಬೇಕೆಂದು ಒತ್ತಾಯಿಸಿ ಅಪಾರ ಜಿಲ್ಲಾಧಿಕಾರಿ ಟಿ.ಯೋಗೇಶ್ ಅವರಿಗೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಕೆ.ರಾಧ ಅವರಿಗೆ ಮನವಿ ಮೂಲಕ ಒತ್ತಾಯಿಸಿದ್ದು ಇಲಾಖೆಯ ಹೊರತಾಗಿ ಹಿರಿಯ ನಾಗರೀಕರ ಸಕಾಲ ಸೇವಾ ಕೇಂದ್ರ ಟ್ರಸಟ್ ಹಾಗೂ ರಾಜ್ಯ ಸರ್ಕಾರಿ ವಿಶ‍್ರಾಂತ ಉದ್ಯೋಗಿಗಳ ಸಂಘಕ್ಕೆ ಈ ಭಾರಿಯ ಜವಾಬ್ದಾರಿಯನ್ನು ವಹಿಸಬೇಕೆಂದು ಮನವಿ ಮಾಡಿದ್ದಾರೆ.

ಈ ಸಂದರ್ಭದ್ಲಲಿ ಹಿರಿಯ ನಾಗರೀಕರ ಸಕಾಲ ಸೇವಾ ಕೇಂದ್ರದ ಜಿಲ್ಲಾಧ್ಯಕ್ಷೆ ಲಲಿತ ಶರ್ಮ, ರಾಜ್ಯ ಸರ್ಕಾರಿ ವಿಶ‍್ರಾಂತ ಉದ್ಯೋಗಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಆರ್.ಉಮಾಕಾಂತ್, ಎ.ವಿ.ಜಗನ್ನಾಥ್, ಎ.ಸಿ.ಸುಬ್ಬಯ್ಯ, ಸಿ.ಆರ್.ಆನಂದ್, ಜಿ.ಎಂ.ಗೋಪಾಲಕೃಷ್ಣ, ಪಿ.ಎಂ.ಚಂದ್ರಶೇಖರ್ ಹಾಜರಿದ್ದರು. (ಕೆ.ಎಂ.ಆರ್)

Leave a Reply

comments

Related Articles

error: