ಕರ್ನಾಟಕಮೈಸೂರು

ಹದಿಹರೆಯದವರ ಬೆಳವಣಿಗೆ: ಉಪನ್ಯಾಸಕರಿಗಾಗಿ ಕಾರ್ಯಾಗಾರ

ಮೈಸೂರು: ಆರ್.ಎಸ್. ನಾಯ್ಡು ನಗರದ ನಗುವನಹಳ್ಳಿ ರಸ್ತೆಯ ಪುಷ್ಪಾಶ್ರಮದ ಹತ್ತಿರ ಎಫ್.ಪಿ.ಐ. ಇಂಡಿಯಾ ಮೈಸೂರು ಶಾಖೆಯಲ್ಲಿ ಶಾಲಾ ಕಾಲೇಜಿನ ಉಪನ್ಯಾಸಕರಿಗಾಗಿ ಹದಿಹರೆಯದವರ ಬೆಳವಣಿಗೆಯ ಬಗ್ಗೆ ಸೆ.15 ಗುರುವಾರದಂದು ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.

ಎಫ್.ಪಿ.ಎ.ಐನ ಕಾರ್ಯಕಾರಿ ಸಮಿತಿ ಸದಸ್ಯ ಪ್ರೊ.ಸಿ.ವೆಂಕಟರಮಣ ಶೆಟ್ಟಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಜೀವನ ಕೌಶಲ್ಯ ಮತ್ತು ಸಂಬಂಧಗಳಿಗೆ ಅನ್ವಯಿಸುವಂತೆ ಮಕ್ಕಳಿಗೆ ಪಠ್ಯವಿಷಯಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳ ಕುರಿತೂ ತಿಳಿಸಬೇಕು. ಶಾಲೆಯಲ್ಲಿ ಶಿಕ್ಷಕರ ಮತ್ತು ಮಕ್ಕಳ ಒಡನಾಟ ಉತ್ತಮವಾಗಿದ್ದು, ಅವರ ಎಲ್ಲ ಸಮಸ್ಯೆಗಳಿಗೂ ಸ್ಪಂದಿಸುವಂತಿರಬೇಕು ಎಂದರು.

ಡಾ. ಜಯಲಕ್ಷ್ಮಿ ಸೀತಾಪುರ ಮಾತನಾಡಿ, ಶಿಕ್ಷಕರು ಗಂಡು-ಹೆಣ್ಣು ಮಕ್ಕಳಲ್ಲಿ ತಾರತಮ್ಯ ಬರದಂತೆ ನೋಡಿಕೊಳ್ಳಬೇಕು. ಹೆಣ್ಣುಮಕ್ಕಳು ಯಾವುದೇ ರೀತಿಯ ಶೋಷಣೆಗೊಳಗಾಗದಂತೆ ನೋಡಿಕೊಳ್ಳಬೇಕೆಂದು ತಿಳಿಸಿದರು.

ಎಫ್.ಪಿ.ಎ.ಐ ಉಪಾಧ್ಯಕ್ಷೆ ಡಾ. ಕೆ.ವಿ. ಲಕ್ಷ್ಮೀದೇವಿ ಮಾತನಾಡಿ ಹದಿಹರೆಯದವರಲ್ಲಿ ಆಗಬಹುದಾದಂತಹ ದೈಹಿಕ, ಮಾನಸಿಕ ಹಾಗೂ ಶಾರೀರಿಕ ಬೆಳವಣಿಗೆಗಳ ಕುರಿತು ತಿಳಿಸಿದರು.

ಎಫ್.ಪಿ.ಎ.ಐ ಅಧ್ಯಕ್ಷ ಮಡ್ಡೀಕೆರೆ ಗೋಪಾಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಫ್.ಪಿ.ಎ.ಐ ಕಾರ್ಯಕಾರಿ ಸಮಿತಿ ಸದಸ್ಯರಾದ ಡಿ.ಎಸ್. ಶಶಿಕುಮಾರ್ ಉಪಸ್ಥಿತರಿದ್ದರು. ಎಫ್.ಪಿ.ಎ.ಐ. ವೈದ್ಯಾಧಿಕಾರಿ ಡಾ. ಪದ್ಮಪ್ರಸಾದ್ ಅಯ್ಯಂಗಾರ್ ಪ್ರಾರ್ಥಿಸಿದರು. ಕಾರ್ಯದರ್ಶಿ ಸಹನಾ ಪುರುಷೋತ್ತಮ್ ಸ್ವಾಗತಿಸಿದರು. ಸಮಾಲೋಚಕಿ ಶಾಹೀನ್ ತಾಜ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸದಸ್ಯ ಸಜ್ಜದ್ ಅಹ್ಮದ್ ಶರೀಫ್ ವಂದಿಸಿದರು.

Leave a Reply

comments

Related Articles

error: